ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇಷ್ಟು ಮನೆ ,ಅಂಗಡಿ ಬೀಗ ಮುರಿತ್ತಿದ್ದ ಕಳ್ಳರು ಸುಲಭವಾಗಿ ಹಣ ಮಾಡಲು ಎಳನೀರು ಕಳ್ಳತನಕ್ಕೆ ಮುಂದಾಗಿದ್ದಾರೆ. ಒಂದು ಈ ಎಳನೀರು ಹೋದ್ರೆ ವ್ಯಾಪರಸ್ತರು ಕೇಸ್ ಕೊಡಲ್ಲ ಕೇಸ್ ಕೊಟ್ರು ಪೊಲೀಸ್ರು ತಲೆ ಕೆಡಿಸಿಕೊಳ್ಳಲ್ಲ ಅಂತ ಎಳನೀರನ್ನು ಬಿಡದೆ ಕಳ್ಳತನ ಮಾಡಿದ್ದಾರೆ. ಸದ್ಯ ಮಾರ್ಕೇಟ್ ನಲ್ಲಿ ಎಳನೀರಿಗೆ ಒಳ್ಳಯ ಬೆಲೆ ಇದ್ದು ಇದನ್ನ ಬಂಡವಾಳ ಮಾಡಿಕೊಂಡು ರಾತ್ರೋರಾತ್ರಿ ಟಾಟಾ ಏಸ್ ನಲ್ಲಿ ಬಂದು ಎಳನೀರು ಕದ್ದು ಎಸ್ಕೇಪ್ ಆಗಿದ್ದಾರೆ.
ಪ್ರತಿದಿನ ಬಂದು ಒಂದಿಲ್ಲೊಂದು ಕಡೆ ಎಳನೀರು ಕದ್ದು ಎಸ್ಕೇಪ್ ಆಗ್ತಿದ್ದ ಖದೀಮರನ್ನ ಜಯನಗರ ಪೊಲೀಸ್ರು ಬಂಧಿಸಿದ್ದಾರೆ.ಆಗಸ್ಟ್ 7 ರಂದು ಮುಂಜಾನೆ ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೊ ನಿಲ್ದಾಣ ಬಳಿ ಕ್ಯಾಂಟರ್ ನಲ್ಲಿ ಬಂದಿದ್ದ ಕಳ್ಳರು 1500 ಎಳನೀರು ಕಳ್ಳತನ ಮಾಡಿದ್ರು.ಪೊಲಿಸ್ರ ಕಣ್ತಪ್ಪಿಸಲು ನಂಬರ್ ಪ್ಲೇಟ್ ಗೆ ಮಸಿ ಬಳಿದು ಬರ್ತಿದ್ದ ಕಳ್ಳರ ಜಾಡು ಹಿಡಿದು ಜಯನಗರ ಪೊಲೀಸ್ರು 60ಕ್ಕೂ ಹೆಚ್ಚು ಸಿಸಿಟಿವಿ ಫಾಲೋ ಮಾಡಿದ್ರು. ಉತ್ತರಹಳ್ಳಿ ಬಳಿ ಟೀ ಕುಡಿದು ಫೋನ್ ಪೇ ಮಾಡಿದ್ದ ಆರೋಪಿಗಳ ಫೋನ್ ಪೇ ನಂಬರ್ ನಿಂದ ಆರೋಪಿಗಳನ್ನ ಜಯನಗರ ಪೊಲೀಸ್ರು ಹೆಡೆಮುರಿ ಕಟ್ಟಿದ್ದಾರೆ.
ಗೌತಮ್ ,ರಘು, ಮಣಿಕಂಠ ಎಂಬುವವರನ್ನು ಬಂಧಿಸಿದ್ದು ಬಂಧಿತರಿಂದ ಕೃತ್ಯಕ್ಕಡ ಬಳಸಿದ್ದ ಟೆಂಪೋ ಹಾಗೂ ಸುಮಾರು 800ಎಳನೀರನ್ನು ಸೀಜ್ ಮಾಡಿದ್ದಾರೆ. ಇನ್ನೂ ಬಂಧಿತ ಆರೋಪಿಗಳ ಮೇಲೆ ಈ ಹಿಂದೆ ಕೂಡ ಹಲವಾರು ಕೇಸ್ ಗಳಿದ್ದು
ಮಣಿಕಂಠನ ಮೇಲೆ ಕೊಲೆಯತ್ನ ಪ್ರಕರಣ ಕೂಡ ದಾಖಲಾಗಿದ್ದು ರೌಡಿ ಶೀಟ್ ಕೂಡ ಇದೆ. ಇನ್ನೂ ಆರೋಪಿಗಳು ಕದ್ದ ಎಳನೀರನ್ನ ಮತ್ತೆ ಬೇರೆ ಏರಿಯಾಗಳಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡ್ತಿದ್ರು. ಸದ್ಯ ಎಳನೀರು ಕಳೆದುಕೊಂಡಿದ್ದ ಮಾಲಿಕ ಸಲೀಂಗೆ ಪೊಲೀಸ್ರು ಎಳನೀರು ವಾಪಸ್ ಕೊಟ್ಟಿದ್ದರೋಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.