ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳಿಗೆ ಖಡಕ್ ಪಾಠ ಮಾಡಿದರು.
ಯಾದಗಿರಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಎಂ. ಪಾಟೀಲ ಸಚಿವರಾದ ಬಳಿದ ಇದೇ ಮೊದಲ ಬಾರಿಗೆ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.
ಯಾದಗಿರಿ ಜಿಪಂ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿಗಳ ಚರ್ಚಿಸಲಾಯಿತು. ಅಭಿವೃದ್ದಿ ವಿಷಯದಲ್ಲಿ ಕೆಲವು ಅಧಿಕಾರಿಗಳಿಗೆ ತರಾಟೆಗೆ ತಗೊಂಡು ಕೆಲಸದ ಕಡೆ ಗಮನಹರಿಸಿ ಎಂದು ಖಡಕ್ಕಾಗಿ ಸಚಿವ ರಾಜಶೇಖರ ಎಂ.ಪಾಟೀಲ ಪಾಠ ಮಾಡಿದರು. ಸಭೆಯಲ್ಲಿ ಪ್ರಮುಖವಾಗಿ ಶಿಕ್ಷಣದಲ್ಲಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದರು. 2016-17ರ ಸಾಲಿನ ರೈತರಿಗೆ ಬರಬೇಕಾದ ಬೆಳೆ ವಿಮೆ ಇನ್ನು ಬಂದಿಲ್ಲ. ಇದರಿಂದ ಸಾವಿರಾರು ರೈತರಿಗೆ ಅನ್ಯಾಯ ಆಗ್ತಿದೆ. ಇದನ್ನು ಸರಿಪಡಿಸಲು ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸುರಪುರ ಶಾಸಕ ರಾಜುಗೌಡ್ರು ಸಚಿವರಿಗೆ ಪ್ರಶ್ನಿಸಿದರು.
ರೈತರು ಬೆಳೆವಿಮೆಯ ಶುಲ್ಕಾನೇ 9 ಕೋಟಿ ಆಗಿದೆ. ಶೇ. 20% ರಷ್ಟಾದ್ರು ನಮ್ಮ ಜಿಲ್ಲೆಯ ರೈತ್ರಿಗೆ ಬೆಳೆ ವಿಮಾ ಬಂದಿಲ್ಲ. ಕೂಡಲೇ ಈ ಬಗ್ಗೆ ಒಂದು ಸಮಿತಿ ರಚನೆ ಮಾಡಿ ಈ ಬಗ್ಗೆ ಪರಿಶೀಲನೆ ಮಾಡಬೇಕು ಅಂತ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಾಜುಗೌಡ್ರು ಒತ್ತಾಯ ಮಾಡಿದರು. ರೈತರು ಹಾವು ಕಡಿದು ಸತ್ತವರಿಗೆ ಪರಿಹಾರ ನಿಧಿ ಕೊಡಿ ಅಂದ್ರೆ ಇಲಾಖೆಯಲ್ಲಿ ದುಡ್ಡಿಲ್ಲ ಅಂತ ಹೇಳುತ್ತಾರೆಂದು ಯಾದಗಿರಿ ಶಾಸಕ ವೆಂಕರಡ್ಡಿ ಮುದ್ನಾಳ ಕೃಷಿ ಇಲಾಖೆ ಅಧಿಕಾರಿ ದೇವಿಕಾ ವಿರುದ್ದ ಸಚಿವರ ಸಮ್ಮುಖದಲ್ಲೇ ಗರಂ ಆದರು.