Publish Date: Sat, 16 Apr 2022 (21:05 IST)
Updated Date: Sat, 16 Apr 2022 (21:09 IST)
ಕನ್ನಡ ಚಿತ್ರರಂಗದಲ್ಲೇ ಧೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚ್ಯಾಪ್ಟರ್ 2 ಸಿನಿಮಾವನ್ನು ಸೂಪರ್ ಸ್ಟಾರ್ ರಜನಿಕಾಂತ್ ವೀಕ್ಷಿಸಿ ಕೊಂಡಾಡಿದ್ದಾರೆ..ಗುರುವಾರ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚೆನ್ನೈನ ಚಿತ್ರಮಂದಿರದಲ್ಲಿ ರಜನಿಕಾಂತ್ KGF- 2 ಅನ್ನು ವೀಕ್ಷಿಸಿದ್ದಾರೆ. ತಲೈವಾ ಕನ್ನಡ ವರ್ಷನ್ನಲ್ಲಿಯೇ ಸಿನಿಮಾವನ್ನು ವೀಕ್ಷಿಸಿ ಫಿದಾ ಆಗಿರುವುದು ವಿಶೇಷ..ಸಿನಿಮಾ ವೀಕ್ಷಿಸಿದ ಬಳಿಕ ನಿನ್ನೆ ಬೆಳಗ್ಗೆ ವಿಜಯ್ ಕಿರಂಗದೂರ್ಗೆ ಕರೆ ಮಾಡಿದ ಸೂಪರ್ ಸ್ಟಾರ್, ಒಳ್ಳೆಯ ಸಿನಿಮಾ ಮಾಡಿದ್ದೀರಾ ಎಂದು ಹೇಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
geetha
Publish Date: Sat, 16 Apr 2022 (21:05 IST)
Updated Date: Sat, 16 Apr 2022 (21:09 IST)