Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ವಾರಕ್ಕೆ ಮುಂಚೆಯೇ ಕೇರಳ ಪ್ರವೇಶಿಸಿದ್ದ ಮುಂಗಾರು ಮಳೆ ಈಗ ಕರಾವಳಿ ಭಾಗದಲ್ಲಿ ರುದ್ರನರ್ತನ ಮಾಡುತ್ತಿದೆ. ಇನ್ನು ಎರಡು ದಿನಗಳ ಕಾಲ ಮಳೆ ಜೊತೆಗೆ ಕರಾವಳಿ ಸೇರಿದಂತೆ ರಾಜ್ಯದ ಜನ ಈ ಎಚ್ಚರಿಕೆ ಗಮನಿಸಬೇಕಿದೆ.
ಮುಂಗಾರು ಮಳೆ ಈ ಬಾರಿ ಬೇಗನೇ ಆಗಮನವಾಗಿರುವುದು ಮಾತ್ರವಲ್ಲದೆ, ಭಾರೀ ಮಳೆಯ ಸೂಚನೆಯನ್ನೂ ನೀಡಿದೆ. ಮೇ 31 ರವರೆಗೂ ರಾಜ್ಯದಲ್ಲಿ ಭಾರೀ ಮಳೆಯಾಗುವ ಸೂಚನೆಯಿದೆ. ಅದರಲ್ಲೂ ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸೂಚನೆಯಿದೆ.
ಕರಾವಳಿ ಜಿಲ್ಲೆಗಳಲ್ಲಂತೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆಯ ಸಂದರ್ಭಗಳಲ್ಲಿ ಸಮುದ್ರ ತೀರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಆದಷ್ಟು ಹೊರಗೆ ಓಡಾಡುವುದನ್ನು ತಪ್ಪಿಸಿದರೆ ಒಳಿತು. ರಸ್ತೆಗಳಲ್ಲಿ ನೀರು ನಿಂತು ವಾಹನ ಚಾಲನೆ ಕಷ್ಟವಾಗಬಹುದು. ಹೀಗಾಗಿ ಅಪಾಯ ಮೈಮೇಲೆಳೆದುಕೊಳ್ಳದೇ ಸುರಕ್ಷಿತ ರಸ್ತೆಗಳಲ್ಲಿ ಮಾತ್ರ ಚಾಲನೆ ಮಾಡಿ.
ಇನ್ನು, ಇದೀಗ ಕೊರೋನಾ ಸೇರಿದಂತೆ ಸಾಂಕ್ರಮಿಕ ರೋಗದ ಭೀತಿಯೂ ಅಧಿಕವಾಗಿದೆ. ಶೈತ್ಯ ಹವೆಯಲ್ಲಿ ಇಂತಹ ರೋಗಗಳು ಹರುಡುವುದು ಹೆಚ್ಚು. ಹೀಗಾಗಿ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಬೆಂಗಳೂರಿನಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿದ್ದು, ಇಲ್ಲಿ ಶೈತ್ಯ ಹವಾಗುಣದಲ್ಲಿ ಆದಷ್ಟು ಮಾಸ್ಕ್ ಧರಿಸಿ ಓಡಾಡುವುದು, ಬೆಚ್ಚಗಿನ ನೀರು ಸೇವನೆ ಮಾಡುವುದು ಮುಖ್ಯವಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವನೆ ಮಾಡಿ.