Karnataka Weather: ವಾಯುಭಾರ ಕುಸಿತದಿಂದ ಭಾರೀ ಮಳೆ ನಿರೀಕ್ಷೆ, ಯಾವಾಗ ಎಲ್ಲಿ ಇಲ್ಲಿದೆ ವಿವರ

Krishnaveni K
ಗುರುವಾರ, 19 ಜೂನ್ 2025 (08:31 IST)
ಬೆಂಗಳೂರು: ರಾಜ್ಯದಾದ್ಯಂತ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಲೇ ಇದೆ. ಇದರ ನಡುವೆ ಹವಾಮಾನ ಇಲಾಖೆ ವಾಯು ಭಾರ ಕುಸಿತದ ಎಚ್ಚರಿಕೆ ನೀಡಿದ್ದು ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂದು ಎಲ್ಲೆಲ್ಲಾ ಮಳೆಯಾಗಲಿದೆ ಇಲ್ಲಿದೆ ವಿವರ.

ವಿಶೇಷವಾಗಿ ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದು ಇನ್ನೂ ನಾಲ್ಕೈದು ದಿನಗಳಿಗೆ ಮುಂದುವರಿಯುವ ನಿರೀಕ್ಷೆಯಿದೆ. ಇದರ ಜೊತೆಗೆ ಹವಾಮಾನ ಇಲಾಖೆ ವಾಯು ಭಾರ ಕುಸಿತ, ಸೈಕ್ಲೋನ್ ಮುನ್ನೆಚ್ಚರಿಕೆ ನೀಡಿದೆ.

ನೈಋತ್ಯ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಲದ ಕೆಲವು ಭಾಗಗಳಲ್ಲಿ ವಾಯುಭಾರ ಮತ್ತಷ್ಟು ಕುಸಿಯಲಿದ್ದು, ಹೆಚ್ಚಿನ ಮಳೆ ನಿರೀಕ್ಷಿಸಲಾಗಿದೆ. ಇದರಿಂದಾಗಿ ಒಳನಾಡು ಮತ್ತು ಭಾರತದ ಪೂರ್ವಭಾಗಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ.

ಕರ್ನಾಟಕದ ವಿಚಾರಕ್ಕೆ ಬಂದರೆ ಇಂದೂ ದಕ್ಷಿಣ ಭಾಗಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ.  ವಿಶೇಷವಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದೂ ಭಾರೀ ಮಳೆಯಾಗಲಿದೆ. ಆದರೆ ಕರ್ನಾಟಕದ ಉತ್ತರದ ಜಿಲ್ಲೆಗಳಲ್ಲಿ ಇಂದು ಮಳೆಯ ಅಬ್ಬರ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಉಳಿದಂತೆ ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ತುಮಕೂರು, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಡಡಾ.. ಎನ್ನಾ ಆಕ್ಷನ್ ಡಾ.. ಸಿನಿಮಾ ಸ್ಟೈಲ್ ನಲ್ಲಿ ಅಸೆಂಬ್ಲಿಯಲ್ಲಿ ಭಾಷಣ ಮುಗಿಸಿದ ಸಿಎಂ ವಿಜಯ್ Video

ಅಡ್ಡಮತದಾನದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ಕೊಡ್ತೇವೆ: ವಿಜಯೇಂದ್ರ

ಟೆಲಿಗ್ರಾಂ ನಿಷೇಧ ತೆರವಾದ್ರೂ ಓಪನ್ ಮಾಡಲಾಗುತ್ತಿಲ್ಲವೇ.. ಏನು ಮಾಡಬೇಕು ಇಲ್ಲಿದೆ ವಿವರ

ವರ್ಷಗಳ ನಂತರ ಕಾಶ್ಮೀರದ ಸ್ವಗ್ರಾಮಕ್ಕೆ ಮರಳಿದ ಪಂಡಿತ್ ಮಹಿಳೆ ಮರದ ಮುಂದೆ ನಿಂತು ಕಣ್ಣೀರು Video

ಸಾಯಲು ಹೊರಟಿದ್ದವಳನ್ನು ಹೀರೋನಂತೆ ಕಾಪಾಡಿದ ಯುವಕ Video

ಮುಂದಿನ ಸುದ್ದಿ
Show comments