Webdunia - Bharat's app for daily news and videos

Install App

ಬೆಲೆ ಏರಿಕೆ ರಾಕ್ಷಸ ಸರ್ಕಾರ ಜನರ ರಕ್ತ ಹೀರುತ್ತಿದೆ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಗರಂ

Sampriya
ಮಂಗಳವಾರ, 1 ಏಪ್ರಿಲ್ 2025 (14:21 IST)
Photo Courtesy X
ಬೆಂಗಳೂರು (ಕರ್ನಾಟಕ): ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಕಸ ವಿಲೇವಾರಿಗೂ ಹೇರಿರುವ ಸೆಸ್ ಬಗ್ಗೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕದಲ್ಲಿ "ಬೆಲೆ ಏರಿಕೆ ಎಂಬ ರಾಕ್ಷಸ" ಸರ್ಕಾರವು ಜಿಗಣೆಗಳಂತೆ ಜನರ ರಕ್ತವನ್ನು ಹೀರುತ್ತಿದೆ ಎಂದರು.

ಪತ್ರಿಕಾ ಹೇಳಿಕೆಯಲ್ಲಿ ಕುಮಾರಸ್ವಾಮಿ ಅವರು, "ಇಂದಿನಿಂದ ಕಾಂಗ್ರೆಸ್ ಸರ್ಕಾರವು ಕಸದ ಮೇಲೂ ಸೆಸ್ ವಿಧಿಸುತ್ತಿದೆ. ಇದರಿಂದ ಜನರು ಸಂಕಷ್ಟ ಪಡುವಂತಾಗಿದೆ. ಸುಳ್ಳು ಹೇಳಿ ಪ್ರತಿ ತುಂಗಳು ಬೆಲೆ ಏರಿಕೆಯನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿರುವ ಕಾಂಗ್ರೆಸ್‌ ಈಸ್ಟ್‌ ಇಂಡಿಯಾ ಕಂಪನಿಯ ಶೈಲಿಯಲ್ಲಿ ಆಡಳಿತ ನಡೆಸುತ್ತಿದೆ. ಸರ್ಕಾರವು ತನ್ನ ಐದು ಭರವಸೆಗಳನ್ನು ಬೆಲೆ ಏರಿಕೆಗೆ ನೆಪವಾಗಿ ಬಳಸುತ್ತಿದೆ. ಆದರೆ ಅದರ ನಿಜವಾದ ಉದ್ದೇಶ ಜನರನ್ನು ಲೂಟಿ ಮಾಡುವುದಲ್ಲದೆ ಬೇರೇನೂ ಅಲ್ಲ. ಭಾರತವನ್ನು ಆಕ್ರಮಿಸಿ ನಿರಂತರವಾಗಿ ಲೂಟಿ ಮಾಡಿದ ಘಜ್ನಿಯ ಮಹಮ್ಮದ್ ಮತ್ತು ಮುಹಮ್ಮದ್ ಘೋರಿ ಕೂಡ ಕಾಂಗ್ರೆಸ್ ಸರ್ಕಾರವು ಕನ್ನಡಿಗರ ಮೇಲೆ ಹೇರುತ್ತಿರುವ ಬೆಲೆ ಏರಿಕೆ ಅಭಿಯಾನಕ್ಕೆ ನಾಚಿಕೆಪಡುತ್ತಾರೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ.

ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಕರ್ನಾಟಕವನ್ನು ಕಾಂಗ್ರೆಸ್ ಕಂಪನಿ ಸರ್ಕಾರವು "ದುರಾಡಳಿತ"ದ ಮೂಲಕ ನಾಶಪಡಿಸಿದೆ ಮತ್ತು ಈಗ ಜನರಿಗೆ ಬರೆ ಎಳೆಯಲು "ಬೆಲೆ ಏರಿಕೆ ರಾಕ್ಷಸ"ದ ರೂಪವನ್ನು ಪಡೆದುಕೊಂಡಿದೆ ಎಂದು ಅವರು ತೀವ್ರ ದಾಳಿ ನಡೆಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Rains: ಗ್ರೇಟರ್ ಬೆಂಗಳೂರು ಅಲ್ಲ ಇದು ವಾಟರ್ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಮಹಾಮಳೆಗೆ ಮೊದಲ ಬಲಿ: ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವು

ಬೆಂಗಳೂರು-ಕನಕಪುರ ರಸ್ತೆಯಲ್ಲಿ ಬಸ್ ಪಲ್ಟಿ: ಸಬ್‌ಇನ್ಸ್‌ಪೆಕ್ಟರ್‌ ಸೇರಿ ಇಬ್ಬರು ದಾರುಣ ಸಾವು

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

ಮುಂದಿನ ಸುದ್ದಿ
Show comments