ಕರ್ನಾಟಕದ ಈ ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ, ಯೆಲ್ಲೊ ಅಲರ್ಟ್ ಘೋಷಣೆ
ಬೆಂಗಳೂರು , ಶುಕ್ರವಾರ, 4 ಅಕ್ಟೋಬರ್ 2024 (09:48 IST)
ಬೆಂಗಳೂರು: ಕೆಲವು ದಿನಗಳಿಂದ ಬಿಡುವು ಪಡೆದಿದ್ದ ವರುಣ ಮತ್ತೆ ಕರ್ನಾಟಕದಲ್ಲಿ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ,ಮೈಸೂರು, ಕೊಡಗು, ಧಾರವಾಡ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳಿಂದ ಸಣ್ಣ ಮಟ್ಟಿಗೆ ಮಳೆಯಾಗುತ್ತಲೇ ಇದೆ.
ಹಾಗಿದ್ದರೂ ಹಗಲು ಗರಿಷ್ಠ ಉಷ್ಣಾಂಶವಿರುತ್ತದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದರೆ ಕನಿಷ್ಠ ಉಷ್ಣಾಂಶ 19.2 ಡಿಗ್ರಿಯಷ್ಟಿದೆ. ರಾಜ್ಯದ ಬಹುತೇಕ ಕಡೆ ಮಳೆಯ ಜೊತೆಗೆ ವಿಪರೀತ ತಾಪಮಾನವೂ ಕಂಡುಬರುತ್ತಿದೆ. ಇಂದೂ ಕೂಡಾ ಸಂಜೆ ಮಳೆಯಾಗುವ ಸಾಧ್ಯತೆಯಿದೆ.
ನಿನ್ನೆ ರಾಮನಗರ, ಮೈಸೂರಿನ ಕೆಲವೆಡೆ, ನಂಜನಗೂಡು, ಚಾಮರಾಜನಗರ, ಬೈಲಹೊಂಗಲ ಸೇರಿದಂತೆ ಹಲವೆಡೆ ನಿನ್ನೆ ಮಳೆಯಾಗಿದೆ. ಇಂದೂ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ಒಟ್ಟು 17 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಇನ್ನು ಕೆಲವು ದಿನ ಮಳೆ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಸುದ್ದಿ