Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕ ಬಂಧಿಖಾನೆ ತಿದ್ದುಪಡಿ

ಕರ್ನಾಟಕ ಬಂಧಿಖಾನೆ ತಿದ್ದುಪಡಿ
bangalore , ಗುರುವಾರ, 17 ಮಾರ್ಚ್ 2022 (16:14 IST)
ಕರ್ನಾಟಕ ಬಂಧಿಖಾನೆಗಳ ತಿದ್ದುಪಡಿ ವಿಧೇಯಕ 2022 ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) ವಿಧೇಯಕ 2022ನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು.
ಎರಡೂ ವಿಧೇಯಕಗಳನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಡಿಸಿದರು.
 
ಬಂಧಿಖಾನೆಗಳ ತಿದ್ದುಪಡಿ ವಿಧೇಯಕವು ಬಂಧಿಗಳೊಂದಿಗಿನ ಸಂಹನಕ್ಕಾಗಿ ಬಂಧಿಖಾನೆಯ ಪರಿಮತಿಯ ಒಳಗೆ ಮತ್ತು ಹೊರಗೆ ಉತ್ತಮ ವಾತಾವರಣವನ್ನು ನಿರ್ಮಿಸುವುದು, ಪೆರೋಲ್ ಉಲ್ಲಂಘನೆ ಮತ್ತು ಇನ್ಯಾವುದೇ ನಿಷೇಧಿತ ವಸ್ತುಗಳನ್ನು ಬಂಧಿಖಾನೆಯೊಳಗೆ ತರುವುದು ಅಥವಾ ಹೊರಗೆ ತೆಗೆದುಕೊಂಡು ಹೋಗುವ ಅಪಾಯವನ್ನು ನಿವಾರಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ 1963ರ ಕರ್ನಾಟಕ ಬಂಧಿಖಾನೆಗಳ ಅಧಿನಿಯಮಕ್ಕೆ ತಿದ್ದುಪಡಿ ತರಲಾಗುತ್ತಿದೆ.
 
ಭೂಸ್ವಾೀಧಿನಕ್ಕೆ ಸಂಬಂಧಿಸಿದಂತೆ ಭೂಸ್ವಾೀಧಿನ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಅಧಿನಿಯಮಕ್ಕೆ ಉಪಬಂಧ ಕಲ್ಪಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಅಧಿನಿಯಮ 1966ಕ್ಕೆ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ವಿವಿ ಉಪಕುಲಪತಿಯಾಗಿ ಕೆ. ಆರ್. ವೇಣುಗೋಪಾಲ ನೇಮಕ ರದ್ದು