Publish Date: Thu, 09 Apr 2026 (09:04 IST)
Updated Date: Thu, 09 Apr 2026 (09:07 IST)
ಬೆಂಗಳೂರು: ಇಂದು ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಈ ಚುನಾವಣೆ ಕರ್ನಾಟಕ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಈ ಚುನಾವಣೆಯಲ್ಲಿ ಗೆಲ್ಲುವುದು ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ ಮುಖ್ಯ.
ಕಳೆದ ಎರಡೂವರೆ ಆಡಳಿತ ಮಾಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಈ ಉಪಚುನಾವಣೆ ಪರೀಕ್ಷೆಯ ಸಮಯವಿದ್ದಂತೆ. ಈಗ ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಕೈಯಲ್ಲೇ ಇದ್ದ ಕ್ಷೇತ್ರಗಳೇ. ಈಗ ಈ ಎರಡು ಕ್ಷೇತ್ರಗಳು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಾಗಿರುವುದು ಕಾಂಗ್ರೆಸ್ ನಾಯಕರಿಗಿರುವ ಸವಾಲಾಗಿದೆ.
ಇನ್ನೊಂದೆಡೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸದ್ಯಕ್ಕೆ ತಣ್ಣಗಾಗಿತ್ತು. ಆದರೆ ಉಪಚುನಾವಣೆ ಮತ್ತು ಅಸ್ಸಾಂ, ಕೇರಳ ಚುನಾವಣೆ ಕೂಡಾ ಇಂದಿಗೆ ಮುಕ್ತಾಯವಾಗುತ್ತಿದ್ದು ಇದಾದ ಬಳಿಕ ಮತ್ತೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾಗುವ ಸಾಧ್ಯತೆಯಿದೆ.
ಒಂದು ವೇಳೆ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಫಲಿತಾಂಶ ಬಂದರೆ ಸದ್ಯಕ್ಕೆ ಈ ವಿಚಾರ ತಣ್ಣಗೇ ಇರಬಹುದು. ಆದರೆ ಕಾಂಗ್ರೆಸ್ ಸೋತಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಚಾರ ಚಾಲ್ತಿಗೆ ಬರುವ ಸಾಧ್ಯತೆಯಿದೆ. ಸದ್ಯಕ್ಕೆ ಸಿಎಂ ಆಗಿ ಸಿದ್ದರಾಮಯ್ಯನವರಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಗೂ ಈ ಚುನಾವಣೆ ಫಲಿತಾಂಶ ಮಹತ್ವದ್ದಾಗಿದೆ.
Krishnaveni K
Publish Date: Thu, 09 Apr 2026 (09:04 IST)
Updated Date: Thu, 09 Apr 2026 (09:07 IST)