ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಳಸಾ ಬಂಡೂರಿ, ಮಹದಾಯಿ ಅಥವಾ ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಗಳ ವಿಷಯವೇ ಪ್ರಮುಖವಾಗಿತ್ತು. ಆದ್ರೆ ಇಲ್ಲಿ ಇವು ಯಾವ ವಿಷಯವು ಪರಿಣಾಮ ಬೀರಿಲ್ಲ ಲಿಂಗಾಯತರು ಮಾತ್ರ ಕಮಲಕ್ಕೆ ಜೈ ಎಂದಿದ್ದಾರೆ.
ಮುಂಬೈ ಕರ್ನಾಟಕದ ಆರು ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ,ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಜೆಪಿಗೆ ಮತದಾರರು ಮಣೆ ಹಾಕಿದ್ದಾರೆ.
ಮಹದಾಯಿ ಹೋರಾಟ ಬಿಜೆಪಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮುಂಬೈ ಕರ್ನಾಟಕದ 50ಕ್ಷೇತ್ರಗಳಲ್ಲಿ 30 ರಲ್ಲಿ ಬಿಜೆಪಿ 17 ರಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಒಂದು ಕ್ಷೇತ್ರದಲ್ಲಿ ಕೆಪಿಜೆಪಿ ಗೆಲವು ಸಾಧಿಸಿದೆ. 2013 ರಲ್ಲಿ 12 ಸ್ಥಾನ ಗೆದಿದ್ದ ಬಿಜೆಪಿ ಈ ಸಲ 18 ಸ್ಥಾನ ಹೆಚ್ಚಿಸಿಕೊಂಡಿದೆ. 31 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ 14 ಕ್ಷೇತ್ರಗಳನ್ನು ತನ್ನ ಹಿಡಿತದಿಂದ ಕಳೆದುಕೊಂಡಿದೆ. ಬಿಜೆಪಿಗೆ ಧಾರವಾಡ, ಗದಗ, ಹಾವೇರಿ,ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಜೆಪಿಗೆ ಮತದಾರರು ಹೆಚ್ಚು ಒಲವು ತೋರಿದ್ದಾರೆ.
ಧಾರವಾಡ ಏಳುಕ್ಷೇತ್ರಗಳಲ್ಲಿ ಬಿಜೆಪಿಗೆ 5, ಕಾಂಗ್ರೆಸಗೆ 2, ಗದಗ ಜಿಲ್ಲೆಯಲ್ಲಿ 4 ಸ್ಥಾನಗಳಲ್ಲಿ ಮೂರು ಬಿಜೆಪಿ 1 ಕಾಂಗ್ರೆಸ್, ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ 4 ಬಿಜೆಪಿ,ಕಾಂಗ್ರೆಸ್ 1 ಹಾಗೂ ಕೆಪಿಜಿಪಿ 1 ಸ್ಥಾನಳಲ್ಲಿ ಗೆದಿದ್ದಾರೆ.
ಇನ್ನು ವಿಜಯಪುರ ಮತ್ತು ಬಾಗಲಕೋಟಿಯಲ್ಲಿ ನೀರಿಕ್ಷೆ ಯಷ್ಟು ಕಮಲ ಅರಳಿಲ್ಲ, ಒಟ್ಟು 15 ಕ್ಷೇತ್ರಗಳಲ್ಲಿ ಕೇವಲ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಅಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಮತದಾರರು ಮಣೆ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದ ಕ್ಷೇತ್ರ ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದಿದ್ದು, ಅಲ್ಲಿ ಬಿಜೆಪಿ ನಾಯಕರ ಬಂಡಾಯದಿಂದ 4 ಸ್ಥಾನಗಳಲ್ಲಿ ಕಾಂಗ್ರೆಸ್,ಜೆಡಿಎಸ್ ಪಾಲಾಗಿವೆ.
ಇನ್ನು ಬಾಗಲಕೋಟಿ ಜಿಲ್ಲೆ ಬಾದಾಮಿಯಲ್ಲಿ ಸಹ ಬಿಜೆಪಿಯ ನಾಯಕರಒಡಕಿನಿಂದ ಕಾಂಗ್ರೆಸ್ ಅಭ್ಯರ್ಥಿ ಸಿಎಂ ಸಿದ್ದರಾಮಯ್ಯಾ ಗೆಲವು ಸಾಧಿಸಿದ್ದಾರೆ.ಇನ್ನು ಗಡಿನಾಡು ಬೆಳಗಾವಿಯಲ್ಲಿ ಈ ಸಲ ಬಿಜೆಪಿ ಉತ್ತಮ್ಮ ಸಾಧನೆ ಮಾಡಿದ್ದು, ಒಟ್ಟು18 ಕ್ಷೇತ್ರಗಳಲ್ಲಿ 10 ಬಿಜೆಪಿ, 8 ರಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ.ಮುಂಬೈ ಕರ್ನಾಟಕದ ಜಿಲ್ಲೆಯಲ್ಲಿ ವೀರಶೈವ ಮತ್ತು ಲಿಂಗಾಯತ ಧರ್ಮದ ವಿವಾದ ಭಾರೀ ಸದ್ದು ಮಾಡಿತ್ತು.
ಇದೇವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಹ ಮತದಾರರ ಬಳಿ ಹೋಗಿದ್ದರು. ಆದ್ರೆಅಲ್ಲಿನ ಮತದಾರರು ಇದಕ್ಕೆ ಮಣೆ ಹಾಕಿಲ್ಲ. ಆದ್ದರಿಂದ ಈ ಸಲ ಮುಂಬೈ ಕರ್ನಾಟಕ ಭಾಗದಲ್ಲಿ ಯಾವುದೇ ಜಾತಿ ಧರ್ಮ, ಮಹದಾಯಿ ವಿಷಯಗಳಿಗೆ ತೆಲೆಕೆಡಿಸಿಕೊಳ್ಳದೇ ಲಿಂಗಾಯತರು ಒಗ್ಗಟ್ಟಾಗಿ ಬಿಜೆಪಿಗೆ ಜೈ ಎಂದಿದ್ದಾರೆ.