Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

2nd PUC exam: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ, ವೇಳಾಪಟ್ಟಿ ಇಲ್ಲಿದೆ

Students

Krishnaveni K

ಬೆಂಗಳೂರು , ಶುಕ್ರವಾರ, 1 ಮಾರ್ಚ್ 2024 (09:53 IST)
Photo Courtesy: Twitter
ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಇಂದಿನಿಂದ ಮಾರ್ಚ್ 22 ರವರೆಗೆ ಪರೀಕ್ಷೆಗಳು ನಡೆಯಲಿವೆ.

ಮೊದಲ ದಿನ ಕನ್ನಡ ಮತ್ತು ಅರೆಬಿಕ್ ಭಾಷೆಯ ಪರೀಕ್ಷೆಗಳಿವೆ. ಬೆಳಿಗ್ಗೆ  10.15 ಕ್ಕೆ ಪರೀಕ್ಷೆ ಆರಂಭವಾಗಲಿದ್ದು, ಮಧ್ಯಾಹ್ನ 1.30 ಕ್ಕೆ ಪರೀಕ್ಷೆ ಮುಕ್ತಾಯವಾಗಲಿದೆ. ಇದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.  80 ಅಂಕ ಬರವಣಿಗೆಗೆ ಮತ್ತು 20 ಅಂಕ ಪ್ರಾಕ್ಟಿಕಲ್ ಗೆ ನಿಗದಿಯಾಗಿದೆ. ಒಟ್ಟು 6,98,624 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.  ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಇದಲ್ಲದೆ, ಪರೀಕ್ಷೆಯಲ್ಲಿ ಅಕ್ರಮ ತಡೆಯಲು 200 ಮೀ. ವ್ಯಾಪ್ತಿಯಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ರವರೆಗೆ ಜೆರಾಕ್ಸ್ ಅಂಗಡಿಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ನಿಷೇಧಾಜ್ಞೆ ಕೂಡಾ ಜಾರಿ ಮಾಡಲಾಗಿದೆ. ದ್ವಿತೀಯ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಿದೆ. ಹಾಲ್ ಟಿಕೆಟ್ ತೋರಿಸಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಉಳಿದಂತೆ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ.

ಮಾರ್ಚ್ 01: ಕನ್ನಡ ಮತ್ತು ಅರೆಬಿಕ್
ಮಾರ್ಚ್‍ 04: ಗಣಿತ, ಶಿಕ್ಷಣ ಶಾಸ್ತ್ರ
ಮಾರ್ಚ್ 05: ರಾಜ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ
ಮಾರ್ಚ್ 06: ಮಾಹಿತಿ ತಂತ್ರಜ್ಞಾನ, ರೀಟೇಲ್, ಅಟೋ ಮೊಬೈಲ್ ಪರೀಕ್ಷೆ
ಮಾರ್ಚ್ 07: ಇತಿಹಾಸ ಮತ್ತು ಭೌತಶಾಸ್ತ್ರ ಪರೀಕ್ಷೆ
ಮಾರ್ಚ್ 09: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 11: ತರ್ಕ ಶಾಸ್ತ್ರ ವ್ಯವಹಾರ ಅಧ್ಯಯನ
ಮಾರ್ಚ್ 13: ಇಂಗ್ಲಿಷ್
ಮಾರ್ಚ್ 15: ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ
ಮಾರ್ಚ್ 16: ಅರ್ಥಶಾಸ್ತ್ರ
ಮಾರ್ಚ್ 18: ಭೂಗೋಳ ಶಾಸ್ತ್ರ, ಜೀವಶಾಸ್ತ್ರ
ಮಾರ್ಚ್ 20: ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 22: ಹಿಂದಿ ಪರೀಕ್ಷೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಗೆ ಖರ್ಚು ಬಲು ದುಬಾರಿ