ಗದಗ : ಔಷಧಿಯ ಸಸ್ಯಕಾಶಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಹೆಸರಾದ ಕಪ್ಪತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸತತ 2 ಗಂಟೆಗಳ ಕಾಲ ಅರಣ್ಯ ಹೊತ್ತಿ ಉರಿದಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಬಳಿಯ ಗೆಜ್ಜಿ ಸಿದ್ಧೇಶ್ವರ ಮಠದ ಬಳಿ ಗುಡ್ಡಕ್ಕೆ ಬೆಂಕಿ ತಗುಲಿದೆ. ಇದರಿಂದ ಸುಮಾರು 30 ಹೆಕ್ಟರ್ಗೂ ಅಧಿಕ ಪ್ರದೇಶದ ಅರಣ್ಯ ಬೆಂಕಿಗಾಹುತಿಯಾಗಿದೆ.
ಕಪ್ಪತ್ತಗುಡ್ಡಕ್ಕೆ ಬೆಂಕಿಯ ಕೆನ್ನಾಲೆಗೆಯಿಂದ ಪ್ರತಿ ವರ್ಷ ಅರಣ್ಯ ನಾಶವಾಗಿ ಅಲ್ಲಿಯ ಪ್ರಾಣಿ, ಪಕ್ಷಿಗಳು, ಆಯುರ್ವೇದ ಔಷಧೀಯ ಸಸ್ಯಗಳು ಹಾನಿಯಾಗ್ತಿವೆ. ಬೆಂಕಿಯನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾದಂತಿದೆ.