ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವವಾಗಿದ್ದು, ರಾಜ್ಯಾದ್ಯಂತ ಕನ್ನಡದ ಕಂಪು ಕಳೆಗಟ್ಟಿದೆ. ಐಟಿ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಇಂದಿನ ರಾಜ್ಯೋತ್ಸವ ವಿಶೇಷವಾಗಿದೆ. ಈ ಕಾರಣಕ್ಕೆ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಕನ್ನಡ ರಾಜ್ಯೋತ್ಸವ ನಿಮಿತ್ತ ಇಂದು ಬನಶಂಕರಿ ದೇವಿಗೆ ಭುವನೇಶ್ವರಿಯ ಅಲಂಕಾರ ಮಾಡಲಾಗುತ್ತದೆ. ಅಲ್ಲದೆ, ಇಂದು ಭಕ್ತರಿಗೆ ವಿಶೇಷ ಭೋಜನ ವ್ಯವಸ್ಥೆಯೂ ಮಾಡಲಾಗಿದೆ. ಅಲ್ಲದೆ, ಎಲ್ಲಾ ಅಪಾರ್ಟ್ ಮೆಂಟ್, ಮಾಲ್, ಶಾಲೆ-ಕಾಲೇಜುಗಳು, ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಕಂಪು ಹರಿದಾಡಲಿದೆ.