ಚಾಲಕನೊಬ್ಬ ಕನ್ನಡ ಪ್ರೇಮ ಮೆರೆದು ಮಾದರಿಯಾಗಿದ್ದಾನೆ.
ಮಂಡ್ಯ ಬಸ್ ಡಿಪೋದ ಕಿಕ್ಕೇರಿ ಮಾರ್ಗದ ಬಸ್ಸಿನಲ್ಲಿ ಕನ್ನಡದ ಡಿಂಡಿಮ ಜೋರಾಗಿದೆ. ಕನ್ನಡ ಪ್ರೇಮ ಮೆರೆದ ಚಾಲಕ- ನಿರ್ವಾಹಕರು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದ್ದಾರೆ.
ಬಸ್ಸನ್ನು ಕನ್ನಡ ಬಾವುಟಗಳು, ಕನ್ನಡ ಸಾಹಿತಿಗಳು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳಿಂದ ಅಲಂಕರಿಸಿದ್ದಾರೆ. ಕನ್ನಡ ದಿನಪತ್ರಿಕೆಗಳನ್ನು
ಪ್ರಯಾಣಿಕರಿಗೆ ಓದಲು ನೀಡಿ ಕನ್ನಡ ಪ್ರೇಮ ಹಾಗೂ ಹೃದಯಶ್ರೀಮಂತಿಕೆಯನ್ನು ಪ್ರದರ್ಶನ ಮಾಡಿದ್ದಾರೆ.
ಪ್ರಯಾಣಿಕರಿಗೆ ಲಡ್ಡು ಸಿಹಿ ವಿತರಿಸಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಚಾಲಕ ಮುರುಳೀಧರ ಮತ್ತು ನಿರ್ವಾಹಕ ರೇವಣ್ಣ ಅವರು ಕಳೆದ 12 ವರ್ಷಗಳಿಂದ ಬಸ್ಸನ್ನು ಸಿಂಗರಿಸಿಕೊಂಡು ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ತಾಲ್ಲೂಕಿನ ಜನತೆಯ ಅಭಿಮಾನಕ್ಕೆ ಭಾಜನರಾಗಿದ್ದಾರೆ.