Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
94ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲ್ ಸ್ಮಿತ್ ಕಪಾಳಮೋಕ್ಷ ವಿವಾದ ಎಲ್ಲಕಡೆ ಭಾರೀ ಸದ್ದು ಮಾಡುತ್ತಿದ್ದು, ಸೋಶಿಯಲ್ ಮೀಡಿಯಾ ಮೂಲಕ ಪ್ರಪಂಚದಾದ್ಯಂತದ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್ ಮತ್ತು ಹಾಲಿವುಡ್ನ ಹಲವಾರು ಸೆಲೆಬ್ರಿಟಿಗಳು ಕೂಡ ಈ ಘಟನೆಗೆ ಭಾರೀ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ.ಈ ಕುರಿತು ಬಿಟೌನ್ ಕಂಗನಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಯಾವುದೋ ಮೂರ್ಖರು ಕೆಟ್ಟ ಜೋಕ್ ಮಾಡಲು ನನ್ನ ತಾಯಿ ಮತ್ತು ಸಹೋದರಿಯ ಅನಾರೋಗ್ಯವನ್ನು ಬಳಸಿದರೆ ನಾನು ಅವರನ್ನು ವಿಲ್ ಸ್ಮಿತ್ ಮಾಡಿದಂತೆ ಕಪಾಳಮೋಕ್ಷ ಮಾಡುತ್ತೇನೆ. ಅವರು ನನ್ನ ಲಾಕ್ ಅಪ್ ಶೋಗೆ ಬರಬೇಕು ಎಂದು ಆಫರ್ ಮಾಡಿದ್ದಾರೆ.