Publish Date: Sun, 30 Sep 2018 (20:26 IST)
Updated Date: Sun, 30 Sep 2018 (20:28 IST)
ಟೀ ಕುಡಿಯುತ್ತ ಕುಳಿತಿದ್ದ ಮಾಜಿ ಮೇಯರ್ ಹಾಗೂ ಹಾಲಿ ಜೆಡಿಎಸ್ ಕಾರ್ಪೋರೇಟರ್ ನನ್ನು ಕಣ್ಣಿಗೆ ಖಾರದ ಪುಡಿ ಎರಚಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ತುಮಕೂರು ನಗರದ ಬಟವಾಡಿ ಸಮೀಪ ಈ ಘಟನೆ ನಡೆದಿದೆ. ಟೀ ಕುಡಿಯುತ್ತಿದ್ದ ಕಾರ್ಪೋರೇಟರ್ ರವಿಕುಮಾರ ಅಲಿಯಾಸ್ ಗಡ್ಡ ರವಿ ಮೇಲೆ ಓರ್ವ ವ್ಯಕ್ತಿ ತನ್ನ ಕೈಯಲ್ಲಿದ್ದ ಬ್ಯಾಗಿನಿಂದ ಖಾರದ ಪುಡಿ ತೆಗೆದು ರವಿಕುಮಾರ ಕಣ್ಣಿಗೆ ಎರಚಿದ್ದಾನೆ. ಆಗ ರವಿಕುಮಾರ ಮತ್ತು ಆತನ ಸ್ನೇಹಿತ ಇಬ್ಬರೂ ಓಡಲಾರಂಭಿಸಿದ್ದಾರೆ. ವಾಹನವೊಂದರಲ್ಲಿದ್ದ ಏಳು ದುಷ್ಕರ್ಮಿಗಳು ಲಾಂಗ್, ಮಚ್ಚುಗಳನ್ನು ಹಿಡಿದು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾರೆ.
ಹಳೇ ದ್ವೇಷವೇ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ.