ನಗರದ ಲಿ ಮೆರಿಡಿಯನ್ ಹೋಟೆಲ್ನಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ನಂದಿ ರಸ್ತೆಯ ಪ್ರೆಸ್ಟೀಜ್ ಗಾಲ್ಪ್ ಶೇರ್ ರೆಸಾರ್ಟ್ ಗೆ ಶಿಫ್ಟ್ ಆಗಿರಿುವುದರಿಂದ ರೆಸಾರ್ಟ್ಗೆ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕರು ರೆಸಾರ್ಟ್ಗೆ ಆಗಮಿಸುತ್ತಿದ್ದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಇಬ್ಬರು ವೃತ್ತ ನಿರೀಕ್ಷಕರು, ಎಂಟಕ್ಕೂ ಹೆಚ್ಚು ಪೇದೆಗಳನ್ನು ಗೇಟ್ ಬಳಿ ಕಾವಲು ಹಾಕಲಾಗಿದೆ.
ದೊಡ್ಡಬಳ್ಳಾಪುರ ಡಿವೈಎಸ್ಪಿ ಮೋಹನ್ ಉಸ್ತುವಾರಿಯಲ್ಲಿ ರಕ್ಷಣೆ ಕಾರ್ಯ ನಡೆಯುತ್ತಿದ್ದು ಸೂಕ್ತ ನಿಗಾ ಇಟ್ಟಿರುವ ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಶಾಸಕರ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕುಮಾರಸ್ವಾಮಿ, ವಿಶ್ವಾಸ ಮತ ಮಂಡಿಸುವಾಗ ಇಲ್ಲಿಂದ ಬೆಂಗಳೂರಿಗೆ ಜೆಡಿಎಸ್ ಶಾಸಕರು ತೆರಳಲಿದ್ದಾರೆ ಎನ್ನಲಾಗಿದೆ. ಮೂರು ದಿನಗಳವರೆಗೆ ಶಾಸಕರಿಗೆ ರೆಸಾರ್ಟ್ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.