Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದಾವಣಗೆರೆಯ ಹೊನ್ನಾಳಿ ಜೆಡಿಎಸ್ ಅಭ್ಯರ್ಥಿ ಶಿವಮೂರ್ತಿ ಗೌಡ ಪಕ್ಷದ ಗಮನಕ್ಕೂ ತರದೆ ನಾಮಪತ್ರ ವಾಪಸ್ ಪಡೆದಿದ್ದಾರೆ. ಜೆಡಿಎಸ್ ತಾಲೂಕು ಅಧ್ಯಕ್ಷ ವೀರೇಶರಾವ್ ಜೊತೆ ಸೇರಿ ನಾಮಪತ್ರ ವಾಪಸ್ ಪಡೆದಿರುವ ಶಿವಮೂರ್ತಿ. ಪಕ್ಷದ ಮುಖಂಡರ ಗಮನಕ್ಕೆ ತಾರದೆ ನಾಮಪತ್ರ ವಾಪಸ್ ಪಡೆದಿರುವುದರಿಂದ ಶಿವಮೂರ್ತಿ ಮತ್ತು ತಾಲೂಕು ಅಧ್ಯಕ್ಷ ವೀರೇಶರಾವ್ರನ್ನ ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಆದೇಶ ಹೊರಡಿಸಲಾಗಿದೆ. ಸ್ಪರ್ಧೆಯಿಂದ ಹಿಂದೆ ಸರಿದಿದ್ದಕ್ಕೆ ಸರಿಯಾದ ಕಾರಣ ತಿಳಿಸದೆ ನಾಮಪತ್ರ ವಾಪಸ್ ಪಡೆದು ದಿಢೀರ್ ಕಾಂಗ್ರೆಸ್ ಸೇರಿರುವ ಶಿವಮೂರ್ತಿ ಗೌಡ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ