Webdunia - Bharat's app for daily news and videos

Install App

ಜಂಬೂ ಸವಾರಿ ಸಕಲ ಸಿದ್ಧತೆ

Webdunia
ಮಂಗಳವಾರ, 4 ಅಕ್ಟೋಬರ್ 2022 (15:10 IST)
ಪಾರಂಪರಿಕ ಮೈಸೂರು ಅರಮನೆ ಆವರಣದಲ್ಲಿ ಅಂಬಾರಿ ಸಿದ್ಧತೆ ಜೋರಾಗಿದೆ. ಬುಧವಾರ ಆಯುಧ ಪೂಜೆ ಸಡಗರ ಮುಗಿದರೆ, ಮರುದಿನವೇ ವಿಜಯದಶಮಿ ಸಂಭ್ರಮ. ಕಳೆದ ಎರಡು ವರ್ಷಗಳಿಂದ ಅಂಬಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು.
ಸಾಂಪ್ರದಾಯಗಳನ್ನು ಅದ್ದೂರಿಯಾಗಿ ಪಾಲನೆ ಮಾಡಲಾಗುತ್ತೆ. ಜಂಬೂಸವಾರಿಗೆ ದಿನಗಣನೆ ಶುರುವಾದ ಹಿನ್ನೆಲೆ ಅರಮನೆಯಲ್ಲಿ ಅರಮನೆ ಅಂಬಾರಿ ಆನೆಗಳಿಗೆ ಪುಷ್ಪಾರ್ಚನೆ ರಿಹರ್ಸಲ್ ನಡೆಸಿದ್ರು. ಕಳೆದ ಮೂರು ದಿನಗಳಿಂದ ತಾಲೀಮು ನಡೆಸಲಾಗಿದೆ. ರಾಷ್ಟ್ರೀಯ ವಂದನ ಶಾಸ್ತ್ರ ನ್ಯಾಷನಲ್ ಸೆಲ್ಯೂಟ್ ಪರೇಡ್ ಮಾಡಲಾಗುತ್ತೆ. ನಂತ್ರ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತೆ. ಕೆಎಸ್‌ಆರ್‌ಪಿ, ಹೋಮ್ ಗಾರ್ಡ್, ಆರ್‌ಪಿಎಫ್, ಡಿ‌ಆರ್, ಸಿ‌ಎಆರ್, ಅಶ್ವಾರೋಹಿದಳದವ್ರಿಂದ ಅಂತಿಮ ಹಂತದ ತಾಲೀಮು ನಡೆಯುತ್ತಿದೆ.
 
ಈ ಬಾರಿ 14 ಆನೆಗಳಲ್ಲಿ 9 ಆನೆಗಳು ಆಯ್ಕೆ ಆಗಿವೆ. ಅರ್ಜುನ ಈಗಾಗಲೇ ಅಂಬಾರಿ ಹೊತ್ತಿರುವ ಕಾರಣ ಅವ್ನಿಗೆ ಗೌರವ ನೀಡಲು ನಿಶಾನೆ ಆನೆಯನ್ನಾಗಿ ಮಾಡಿಲಾಗಿದೆ ಅಂತ ಡಿಸಿಎಫ್ ಕರಿಕಾಲನ್ ತಿಳಿಸಿದ್ರು .
 
ಇನ್ನು ಇತ್ತ ಅರಮನೆ ಆವರಣದಲ್ಲಿ ಜಂಬೂ ಸವಾರಿ ವೀಕ್ಷಣೆಗೆ ಬೃಹತ್ ಪೆಂಡಾಲ್ ಹಾಗೂ ಕುರ್ಚಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಗೋಲ್ಡ್ ಪಾಸ್ ಹೊಂದಿರುವವರಿಗೆ ಹಾಗೂ ವಿವಿಐಪಿಗಳಿಗೆ ವಿಶೇಷ ಆಸನದ ವ್ಯವಸ್ಥೆ ಇರಲಿದೆ. 5000 ಕೊಟ್ಟು ಗೋಲ್ಡ್ ಪಾಸ್ ಪಡೆದವರು ಮಾತ್ರ ಅರಮನೆ ಆವರಣದಲ್ಲಿ ಅಂಬಾರಿ ವೀಕ್ಷಿಸಬಹುದಾಗಿದೆ. ಇನ್ನು ವಿಜಯದಶಮಿ ದಿನದ ಬೆಳಗ್ಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ಬೆಳ್ಳಿರಥದಲ್ಲಿ ಕಳುಹಿಸಲಾಗುತ್ತದೆ. ಬೆಳಗ್ಗೆ ದೇವಿಗೆ ವಿಶೇಷ ಅಭಿಷೇಕ ಹಾಗೂ ಪ್ರಾರ್ಥನೆಯನ್ನು ಮಾಡಿ ಅರಮನೆಗೆ ಕಳುಹಿಸಲಾಗುತ್ತದೆ ಅಂತ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments