Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾವೇರಿ ನೀರು ಕಳ್ಳರಿಗೆ ಜಲಮಂಡಳಿ ಅಧ್ಯಕ್ಷರ ಎಚ್ಚರಿಕೆ

kaveri

geetha

bangalore , ಗುರುವಾರ, 11 ಜನವರಿ 2024 (14:00 IST)
ಬೆಂಗಳೂರು-ಕಾವೇರಿ ನೀರು ಕಳ್ಳರ ವಿರುದ್ಧ ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಸಮರಸಾರಿದ್ದಾರೆ.ಅಕ್ರಮ ಕಾವೇರಿ ನೀರು ಸಂಪರ್ಕ ಪತ್ತೆಗೆ ಜಲಮಂಡಳಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ.ಬಿಬಿಎಂಪಿ ವ್ಯಾಪ್ತಿಯ ವಾಣಿಜ್ಯ ಕಟ್ಟಡ  ಬಹುಮಹಡಿ ಕಟ್ಟಡ ಹಾಗೂ ಕೈಗಾರಿಕಾ ಕಟ್ಟಡಗಳಲ್ಲಿ ಕಾವೇರು ನೀರು ಕಳ್ಳತನದ ದೂರು ದಾಖಲಾಗಿದೆ.ಹೀಗಾಗಿ ವಾಣಿಜ್ಯ ಕಟ್ಟಡಗಳು, ಬಹುಮಹಡಿ ವಸತಿ ಕಟ್ಟಡಗಳು ಮತ್ತು ಕೈಗಾರಿಕಾ ಕಟ್ಟಡಗಳಲ್ಲಿ ಅಕ್ರಮ ನೀರಿನ ಸಂಪರ್ಕ ಪತ್ತೆಗೆ ಸೂಚನೆ ನೀಡಲಾಗಿದೆ.
 
ಅನಧಿಕೃತ ನೀರು ಮತ್ತು ಒಳಚರಂಡಿ ಸಂಪರ್ಕ ದಿಂದ ಬೆಂಗಳೂರು ಜಲಮಂಡಳಿಗೆ  ಭಾರೀ ನಷ್ಟ ಉಂಟಾಗಿದೆ.ಆರ್ಥಿಕ ನಷ್ಟದ ಹಿನ್ನಲೆ ಜಲಮಂಡಳಿ ಅಧ್ಯಕ್ಷರು ಅಲರ್ಟ್ ಆಗಿದ್ದಾರೆ.ಅನಧಿಕೃತ ನೀರು ಹಾಗೂ ಒಳಚರಂಡಿ ಸಂಪರ್ಕ ಪತ್ತೆ ಹಚ್ಚುವಂತೆ ಚೀಫ್ ಎಂಜಿನಿಯರ್ ಗಳಿಗೆ ಜಲಮಂಡಳಿ ಅಧ್ಯಕ್ಷರು ಸೂಚನೆ ನೀಡಿದ್ದು,ಮಾರ್ಚ್ 31 ರೊಳಗೆ ಸರ್ವೆ ನಡೆಸಿ ಅಕ್ರಮ ನೀರು ಸಂಪರ್ಕ ಹಾಗೂ ಬೈಪಾಸ್ ನೀರಿನ ಸಂಪರ್ಕ ಕ್ರಮಕ್ಕೆ ಸೂಚಿಸಿದ್ದಾರೆ ಜೊತೆಗೆ ಮಾರ್ಚ್ 31 ರೊಳಗೆ ವರದಿ ನೀಡುವಂತೆ ಚೀಫ್ ಎಂಜಿನಿಯರ್ ಗಳಿಗೆ ಕಟ್ಟಿನಿಟ್ಟಿನ ಆದೇಶ ನೀಡಿದ್ದಾರೆ.
 
ಈ ಬಗ್ಗೆ ಏಪ್ರಿಲ್ ೧ ರಿಂದ ಆಂತರಿಕ ಆಡಿಟ್ ತಂಡದಿಂದ ಪರಿಶೀಲಿಸಲಾಗುವುದು.ಈ ವೇಳೆ ನ್ಯೂನತೆ ಕಂಡುಬಂದಲ್ಲಿ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ.ಇಲಾಖೆಗೆ ಉಂಟಾಗುವ ಆರ್ಥಿಕ ನಷ್ಟವನ್ನು ಸಂಬಂಧಪಟ್ಟ ಸಿಬ್ಬಂದಿ ಅಧಿಕಾರಿಗಳೇ ಭರಿಸುವ ಎಚ್ಚರಿಕೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇ ತಿಂಗಳ ಬಳಿಕ ದುಬಾರಿಯಾಗಲಿದೆ ಮೊಬೈಲ್ ರಿಚಾರ್ಜ್