Publish Date: Fri, 22 Sep 2023 (15:00 IST)
Updated Date: Fri, 22 Sep 2023 (16:15 IST)
ಸುಪ್ರೀಂ ಕೋರ್ಟ್ ತೀರ್ಪು ಗಾಯದ ಮೇಲೆ ಬರ ಎಳೆದಂತಾಗಿದೆ ಎಂದು BJP ಮಾಜಿ ಶಾಸಕ C.T.ರವಿ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ನಾವು ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡ್ತಿಲ್ಲ. ಆದರೆ ನಮ್ಮ ರಾಜ್ಯ ಸರ್ಕಾರದ ತಪ್ಪುಗಳನ್ನು ಎತ್ತಿ ಹೇಳಬೇಕಿದೆ ಎಂದ್ರು. ತಮಿಳುನಾಡು ಕೇಳುವ ಮೊದಲೇ ಕರ್ನಾಟಕ ನೀರು ಬಿಟ್ಟಿತ್ತು.. CWRC ನಮ್ಮ ನೆರವಿಗೆ ಬರಲಿಲ್ಲ.. ಸುಪ್ರೀಂ ಕೋರ್ಟ್ನಲ್ಲೂ ಈಗ ತೀರ್ಪು ಬಂತು. ಕೇಳುವ ಮೊದಲೇ ನೀರು ಬಿಟ್ಟಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ರು.. ಈಗ ನೀರು ಬಿಟ್ಟು ಸಭೆ ಕರೆಯುವ ಹೊಸ ಸಂಪ್ರದಾಯ ಶುರು ಮಾಡಿದ್ದೀರಿ.. ನೀರು ಬಿಟ್ಟ ಮೇಲೆ ಸಂಸದರ ಸಭೆ ಮಾಡಿದ್ರಿ.. ನೀರು ಬಿಟ್ಟ ಮೇಲೆ ವಾದ ಶುರು ಮಾಡಿದ್ರಿ ಎಂದು ಕಿಡಿಕಾರಿದ್ರು