Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಶಿ ಸೋಪ್ಸ್ ಮಾಲೀಕನ ಮೇಲೆ ಐಟಿ ರೇಡ್!

ಶಶಿ ಸೋಪ್ಸ್ ಮಾಲೀಕನ ಮೇಲೆ ಐಟಿ ರೇಡ್!
ದಾವಣಗೆರೆ , ಗುರುವಾರ, 10 ಜನವರಿ 2019 (15:33 IST)
ದಾವಣಗೆರೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆ ಉದ್ಯಮಿ, ಶಶಿ ಸೋಪ್ಸ್ ಇಂಡಸ್ಟ್ರೀಸ್ ನ ಮಾಲಿಕ ರವಿರಾಜ್ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಗೋವಾ ಮೂಲದ ಮೂವತ್ತಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರವಿರಾಜ್ ಹಾಗೂ ಅವರ ಪತ್ನಿ ಲಲಿತಾಗೆ ಸೇರಿರುವ ಮಹಾರಾಜ ಸೋಪ್ಸ್ ಇಂಡಸ್ಟ್ರೀಸ್ , ಎರಡು ಲಲಿತಾ ಇಂಟರ್‌ನ್ಯಾಷನಲ್ ಸ್ಕೂಲ್, ಟಿವಿಎಸ್ ಷೋರೂಂ ಹಾಗೂ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ರವಿರಾಜ್ ಹಾಗೂ ಆತನ ಪತ್ನಿ ಕೋಟಿ ರೂಪಾಯಿ ಮೌಲ್ಯದ ಆಸ್ತಿ, ಹಣ, ಕಾರ್ಖಾನೆ, ಸ್ಕೂಲ್ ಗಳನ್ನ ಹೊಂದಿದ್ದು ತೆರಿಗೆ ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಅಧಿಕಾರಿಗಳು ಇವತ್ತು ಇಡೀ ದಿನ ದಾಖಲೆ ಪರಿಶೀಲನೆ ನಡೆಸಲಿದ್ದಾರೆ. ರವಿರಾಜ್ ದಾವಣಗೆರೆಯ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿದ್ದು, ಪ್ರಮುಖ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಗರಿಗೆ ಜೀವಜಲ ಇನ್ನೂ ತುಟ್ಟಿ!