ಬೆಂಗಳೂರು: ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾಗ ಟೆನ್ ಷನ್ ಆಗ್ಲಿಲ್ಲ. ಆದ್ರೆ ನನ್ನ ಹೆಂಡತಿ, ಮಗು ಬಗ್ಗೆ ಏನಾಗ್ತಿದೆ ಎಂದು ಗೊತ್ತಾಗದೇ ಗೊಂದಲ ಆಯ್ತು ಎಂದು ರಾಕಿಂಗ್ ಸ್ಟಾರ್ ಯಶ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಐಟಿ ದಾಳಿ ಮುಗಿದ ತಕ್ಷಣ ತಮ್ಮನ್ನು ಸುತ್ತುವರೆದ ಮಾಧ್ಯಮಗಳ ಮುಂದೆ ಮಾತನಾಡಿದ ಯಶ್ ‘ಊಹಾಪೋಹಗಳೆಲ್ಲಾ ಬೇಡ. ಅವರು ಸರ್ಕಾರಿ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ಅವರಿಗೆ ನಾವು ಏನು ಹೇಳ್ಬೇಕು. ಅದನ್ನೆಲ್ಲಾ ಹೇಳಿದ್ದೇವೆ ಅಷ್ಟೇ ಇನ್ನೇನಿಲ್ಲ. ಇಲ್ಲದ ಬಣ್ಣಗಳು ಬೇಡ’ ಎಂದು ಯಶ್ ಕೂಲಾಗಿಯೇ ಹೇಳಿದ್ದಾರೆ.
ಇನ್ನು, ಐಟಿ ದಾಳಿ ಮುಗಿದ ತಕ್ಷಣ ಯಶ್, ಹುಬ್ಬಳ್ಳಿಗೆ ಹೋಗಬೇಕಿದ್ದ ತಮ್ಮ ಕಾರ್ಯಕ್ರಮ ರದ್ದುಗೊಳಿಸಿ ಪತ್ನಿ ರಾಧಿಕಾ ಮತ್ತು ಮಗುವನ್ನು ನೋಡಲು ತೆರಳಿದರು. ಎರಡು ದಿನದಿಂದ ಅಲ್ಲಿ ಏನಾಗಿತ್ತು ಎಂದು ಗೊತ್ತಾಗಿರಲಿಲ್ಲ. ಮಗುವಿಗೆ ಸ್ನಾನ ಮಾಡಿಸಕ್ಕಾಗಲ್ಲ ಹೀಗೆ ಏನೇನೋ ಚಿಂತೆ ಇರುತ್ತಲ್ವಾ? ಹೀಗಾಗಿ ಅವರ ಜತೆ ಟೈಮ್ ಸ್ಪೆಂಡ್ ಮಾಡಬೇಕು ಎಂದು ಯಶ್ ಹೇಳಿದ್ದಾರೆ. ಇನ್ನು, ಎರಡು ದಿನದಿಂದ ತಮ್ಮ ಮನೆಯಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಕುತೂಹಲದಿಂದ ಕಾದು ಕೂತಿದ್ದ ಅಭಿಮಾನಿಗಳಿಗೂ ಯಶ್ ಧನ್ಯವಾದ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ