Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೋದಿ ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದು ನಿಜ: ಪೇಜಾವರ ಶ್ರೀ

ಮೋದಿ ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದು ನಿಜ: ಪೇಜಾವರ ಶ್ರೀ
ಮೈಸೂರು , ಮಂಗಳವಾರ, 5 ಜೂನ್ 2018 (19:10 IST)
ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಅಂತ ನಾನು ಹೇಳಿಲ್ಲ. ‌ಕಪ್ಪು ಹಣ, ಗಂಗಾ ನದಿ ಶುದ್ದೀಕರಣ ಆಗಿಲ್ಲ ಎಂದು ನನಗೆ ಮಾಹಿತಿ ಬಂತು. ಈ ಎರಡು ವಿಷಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ ಎಂದು ಮೈಸೂರಿನಲ್ಲಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ಹೇಳಿದ್ದಾರೆ.  
ಮೈಸೂರಿನಲ್ಲಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ ಸುದ್ದಿಗೋಷ್ಠಿ ನಡೆಸಿ ಈ ಮಾತಿನ ಹಿಂದೆ ಕೇಂದ್ರ ಸರ್ಕಾರಕ್ಕೆ ಉತ್ತೇಜನ ಮಾಡುವ ಉದ್ದೇಶವಿದೆ. ಆದ್ರೆ ಕೆಲ ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
 
ಕೇಂದ್ರ ಸಚಿವ ಸದಾನಂದಗೌಡ ಮಾತ್ರ ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ.  ಕೇಂದ್ರ ಸರ್ಕಾರಕ್ಕೆ ಇನ್ನೂ ಒಂದು ವರ್ಷ ಕಾಲಾವಕಾಶ ಇದೆ. ಈ ಅವಧಿಯಲ್ಲಿ ಇನ್ನೂ ಸಾಧನೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಕೇಂದ್ರ ಸರ್ಕಾರ ಐದು ವರ್ಷ ಪೂರೈಸಬೇಕು ಅಂತ ಹೇಳಿದ್ದೆ‌. ಕೇಂದ್ರ ಸರ್ಕಾರ ಮಾತ್ರವಲ್ಲ, ಈಗಿನ ರಾಜ್ಯ ಸರ್ಕಾರವೂ ಐದು ವರ್ಷ ಪೂರೈಸಲಿ ಎಂಬುದು ನನ್ನ ಅಪೇಕ್ಷೆ. ಯಾವುದೇ ಸರ್ಕಾರ ಇರಲಿ, ಅಧಿಕಾರದ ಪೂರ್ಣ ಅವಧಿ ಆಡಳಿತ ನಡೆಸಬೇಕು. ಪದೇ ಪದೇ ಚುನಾವಣೆ ನಡೆಯಬಾರದು. ಅದರಿಂದ ದುಂದು ವೆಚ್ಚ,ಗಲಾಟೆ, ಗದ್ದಲ ಆಗುತ್ತೆ ಎಂದರು. 
 
ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿವೆ. ಇದಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡಿವೆ. ಆದ್ರೆ ಈಗಲೂ ಆ ಪಕ್ಷಗಳಿಗೆ ಭಯ ಇದೆ. ರೆಸಾರ್ಟ್ ರಾಜಕಾರಣ ನಿಲ್ಲಬೇಕು. ಹೊರ ದೇಶಗಳಲ್ಲಿ ಸರ್ವ ಪಕ್ಷ ಸರ್ಕಾರಗಳ ರಚನೆಯಾಗಿವೆ. ಅದೇ ರೀತಿ ನಮ್ಮಲ್ಲಿಯೂ ಆಗಬೇಕು. ಚುನಾವಣಾ ಸಂದರ್ಭದಲ್ಲಿ ಅಪ್ಪನಾಣೆ ಅಂತೆಲ್ಲ ಟೀಕೆ ಮಾಡಿಕೊಂಡವರು ಈಗ ಒಟ್ಟಿಗಿದ್ದಾರೆ ಎಂದರು. 
 
ಜೆಡಿಎಸ್ - ಕಾಂಗ್ರೆಸ್ ಸೇರಿ ಸರ್ಕಾರ ರಚಿಸಿವೆ. ಇವುಗಳೊಂದಿಗೆ ಬಿಜೆಪಿಯೂ ಸೇರಿಕೊಂಡು ಸರ್ವ ಪಕ್ಷ ಸರ್ಕಾರ ರಚಿಸಬಹುದು. ಹಲವಾರು ದೇಶಗಳಲ್ಲಿ ಇಂತಹ ಸರ್ವ ಪಕ್ಷ ಸರ್ಕಾರಗಳು ಅಸ್ತಿತ್ವದಲ್ಲಿವೆ ಎಂದು ಪೇಜಾವರ ಶ್ರೀಪಾದರ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಸರಕಾರದ ವಿರುದ್ಧವೇ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ