ಇನ್ನೂ.. ಹಡ್ಸನ್ ವೃತ್ತ, ಎನ್.ಆರ್.ಸ್ಕ್ವೇರ್, ಟೌನ್‌ಹಾಲ್, ಬ್ರಿಗೇಡ್ ರಸ್ತೆ, ಮೆಯೊ ಹಾಲ್, ಕೆ.ಎಚ್.ವೃತ್ತ, ಅಶೋಕ ಪಿಲ್ಲರ್, ಡೇರಿ ವೃತ್ತ, ಹಡ್ಸನ್ ಪೊಲೀಸ್ ಪಾರ್ಕ್, ಗುಬ್ಬಿ ತೋಟದಪ್ಪ ಛತ್ರ ರಸ್ತೆ, ಎಂಟಿಆರ್ ಗೇಟ್, ಸರ್ಕಲ್ ಮಾರಮ್ಮ, ವಿಧಾನಸೌಧ, ಗಾಲ್ಫ್ ಕೋರ್ಸ್, ಉಪ್ಪಾರಪೇಟೆ, ಸುಮನಹಳ್ಳಿ, ಮಾಧವನ್ ಪಾರ್ಕ್, ಬಿಇಎಲ್, ಹೆಬ್ಬಾಳ, ಕಂಟೋನ್ಮೆಂಟ್, ಜ್ಞಾನಭಾರತಿ, ಗುಟ್ಟಹಳ್ಳಿ, ದೊಮ್ಮಲೂರಿನ ಜಂಕ್ಷನ್‌ಗಳಲ್ಲಿ ಜನರಿಗೆ ವಿಶ್ರಾಂತಿ ಪಡೆಯಲು ಜಾಗಗಳನ್ನು ನಿರ್ಮಾಣ ಮಾಡಲಾಗತ್ತಿದ್ದು, ಟೌನ್‌ಹಾಲ್, ಶೇಷಾದ್ರಿ ರಸ್ತೆಯ ಮೌರ್ಯ ವೃತ್ತ, ಹಡ್ಸನ್ ವೃತ್ತ, ಎನ್.ಆರ್.ಸ್ಕ್ವೇರ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ.ಜಂಕ್ಷನ್‌ಗಳ ಅಭಿವೃದ್ಧಿ ಹಿಂದಿಗಿಂತ ಭಿನ್ನವಾಗಿದೆ. ಸುತ್ತಮುತ್ತ ಯಾವುದೇ ಬೇಲಿಗಳನ್ನು ನಿರ್ಮಿಸದೆ, ತೆರೆದ ಜಾಗದ ರೀತಿ ಇದನ್ನು ನಿರ್ಮಿಸಲಾಗುತ್ತಿದೆ. ಜನರು ಯಾವಾಗ ಬೇಕಾದರೂ ಬಂದು ವಿಶ್ರಾಂತಿ ಪಡೆಯಬಹುದಾಗಿದೆ. ಇದೇ ರೀತಿ ನಗರದ ಎಲ್ಲ ಜಂಕ್ಷನ್‌ಗಳನ್ನೂ ಅಲ್ಲಿನ ಸ್ಥಳಕ್ಕೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ.