Publish Date: Wed, 07 Sep 2022 (12:29 IST)
Updated Date: Wed, 07 Sep 2022 (11:32 IST)
ಬೆಂಗಳೂರು : ಇಂದು ನಗರದ ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಿನ ಜಾವ 6 ಗಂಟೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. 200 ಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ ಒಟ್ಟು 20 ಕಡೆಗಳಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಓಲ್ಡ್ ಏರ್ ಪೋರ್ಟ್ ರೋಡ್, ಕನ್ನಿಂಗ್ ಹ್ಯಾಮ್ ರೋಡ್, ಯಶವಂತಪುರ, ಏರ್ ಪೋರ್ಟ್ ರೋಡ್ ಸೇರಿದಂತೆ 20 ಕಡೆ ದಾಳಿ ನಡೆದಿದೆ. ಐಟಿ ಅಧಿಕಾರಿಗಳು ಬೆಳಗ್ಗೆಯಿಂದ ಕಾರ್ಯಾಚರಣೆ ಮಾಡುತ್ತಿದ್ದಾರೆ.