ಕಮಿಷನ್ ಹಣ ಪಡೆದುಕೊಳ್ಳಲು ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಮನೆಯಲ್ಲಿ ಹುಂಡಿ ಇಟ್ಟುಕೊಂಡಿದ್ದಾರೆ.
ಹೀಗಂತ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ಇತರ ಮೂಲಗಳಿಂದ ಸಿಎಂಗೆ ಕಮಿಷನ್ ದೊರೆಯುತ್ತಿದೆ. ಕಂಟ್ರಾಕ್ಟರ್ ಗಳಿಗೆ ಎನ್ ಓ ಸಿ ನೀಡೋಕೆ ಯಡಿಯೂರಪ್ಪ ಮನೆಯಲ್ಲಿ ಹುಂಡಿ ಇಟ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದ ರೇವಣ್ಣ, ಅನರ್ಹ ಶಾಸಕ ಹೆಚ್.ವಿಶ್ವನಾಥ್ ರನ್ನು ಉಪ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ರು.