Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಳಗಾವಿ : ಹೆಂಡತಿಯನ್ನು ಚುಡಾಯಿಸುತ್ತಿದ್ದ ನೆರೆಮನೆಯವನನ್ನು ಪತಿ ಪ್ರಶ್ನೆ ಮಾಡಿದ್ದಾನೆ.
ಇದಕ್ಕೆ ಕೋಪಗೊಂಡ ನೆರೆಮನೆಯಾತ ಪತಿಯನ್ನು ಕಟ್ಟಿಗೆಯಿಂದ ಹೊಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಾನಾಪೂರದಲ್ಲಿ ನಡೆದಿದೆ.
ಖಾನಾಪುರ ಪಟ್ಟಣದ ಬಾಹೇರ್ಗಲ್ಲಿಯ ನಿವಾಸಿ ಮಾರುತಿ ಜಾಧವ್(40) ಕೊಲೆಯಾದ ವ್ಯಕ್ತಿ. ಪಕ್ಕದ ಮನೆಯ ಪ್ರಶಾಂತ್ ನಾರ್ವೇಕರ್(35) ಹತ್ಯೆ ಮಾಡಿದ ಆರೋಪಿ.
ಇದರಿಂದ ಕೋಪಗೊಂಡ ಪ್ರಶಾಂತ್ ಭಾನುವಾರ ರಾತ್ರಿ ಮಾರುತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾನೆ. ಘಟನೆ ಬಗ್ಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.