ವೇದ, ಸಂಸ್ಕೃತ ಸಂಭಾಷಣೆ ಶಿಬಿರ ಸೇರಿ ಹಲವು ಬೌದ್ಧಿಕ ಚಟುವಟಿಕೆಗಳನ್ನು ಪ್ರತಿ ವರ್ಷ ಸಮರ್ಥವಾಗಿ ನಿರ್ವಹಿಸುತ್ತಾ ಬಂದಿರುವ ಪ್ರಬೋಧಿನೀ ಗುರುಕುಲ ಈ ವರ್ಷವೂ ವೇದ ಶಿಕ್ಷಾ ವರ್ಗ ನಡೆಸಲು ತೀರ್ಮಾನಿಸಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 7 ಮತ್ತು 8ನೇ ತರಗತಿ ಪರೀಕ್ಷೆ ಬರೆಯಲಿರುವ ಗಂಡು ಮಕ್ಕಳಿಗೆ ಅವಕಾಶ ಇದೆ.
ಏನಿದು ವೇದ ಶಿಕ್ಷಾ ವರ್ಗ..?
ವೇದ, ಸಂಸ್ಕೃತ ಸಂಭಾಷಣೆ, ಭಜನೆ, ಭಗವದ್ಗೀತೆ, ದೇಶಿ ಕ್ರೀಡೆ, ಈಜು, ಯೋಗ ಸೇರಿ ಹಲವು ಬೌದ್ಧಿಕ ಹಾಗೂ ಶಾರೀರಿಕ ಕಲಿಕೆಗೆ ಅವಕಾಶ ನೀಡಲಾಗುತ್ತದೆ.
ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗುತ್ತದೆ.
ಈ ತರಬೇತಿ ಕಾರ್ಯಗಾರದಲ್ಲಿ ಭಾಗಿಯಾಗಲು ಯಾವುದೇ ಶುಲ್ಕವಿರುವುದಿಲ್ಲ. ಮೊದಲು ಬಂದ 50 ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಗುರುಕುಲ ತಿಳಿಸಿದೆ.
ಅರ್ಜಿ ಸಲ್ಲಿಕೆ ಹೇಗೆ..?
ಆಸಕ್ತರು ಗುರುಕುಲ ವಿಳಾಸಕ್ಕೆ 200 ರೂ. ಎಂಒ ಕಳಿಸುವ ಮೂಲಕ ಅರ್ಜಿ ಪಡೆಯಬಹುದಾಗಿದೆ.