Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರಿನಲ್ಲಿ ಮಾಜಿ ಶಾಸಕ ಬಿ.ಆರ್ ಪಾಟೀಲ್ ಅವರಿಗೆ ಪತ್ರ ಬರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕ್ಷಮೆ ಕೋರಿದ್ದಾರೆ. ಮೇಕೆದಾಟು ಪಾದಯಾತ್ರೆ ವೇಳೆ ಬಿ.ಆರ್. ಪಾಟೀಲ್ ಅವರನ್ನು ತಳ್ಳಿ, ಟೋಪಿ ಕಿತ್ತು ಹಾಕಿದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆಶಿ ಪತ್ರ ಬರೆದು ಕ್ಷಮೆ ಕೋರಿದ್ದಾರೆ.
ಪಾದಯಾತ್ರೆ ಮೈದಾನಕ್ಕೆ ಬಂದ ಸಂದರ್ಭದಲ್ಲಿ ಪಾಟೀಲ್ ಅವರನ್ನು ಅನುಚಿತವಾಗಿ ನಡೆಸಿಕೊಂಡರೆಂಬ ಆರೋಪ ಕೇಳಿ ಬಂದಿತ್ತು. ಪಾಟೀಲ್ ಈ ಬಗ್ಗೆ ಪಕ್ಷದ ಹೈಕಮಾಂಡ್‌ಗೂ ದೂರು ನೀಡಿದ್ದರು. ಹಿರಿಯ ಮುಖಂಡರಿಗೆ ಅಪಮಾನ ಮಾಡಿದ ಬಗ್ಗೆ ಹೈಕಮಾಂಡ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಡಿಕೆಶಿ ಪತ್ರ ಬರೆದಿದ್ದಾರೆ. ಸ್ವಲ್ಪ ದಿನದಲ್ಲೇ ಖುದ್ದು ಭೇಟಿ ಮಾಡುವುದಾಗಿಯೂ ಪತ್ರದಲ್ಲಿ ಡಿಕೆಶಿ ಬಯಸುತ್ತೇನೆ.