ಹಂಪಿ ಎಕ್ಸ್ ಪ್ರೆಸ್ ರೈಲು ಮಾರ್ಗ ಬದಲಾವಣೆ ಮಾಡಿರೋದು ನೀಟ್ ಎಕ್ಸಾಮ್ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಗಳ ಪರದಾಟಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆಂಗಳೂರಿಗೆ ತೆರಳುತ್ತಿದ್ರು. ಮಾರ್ಗ ಬದಲಾವಣೆಯಿಂದ ತಡವಾಗಿದೆ ಹಂಪಿ ಎಕ್ಸ್ ಪ್ರೆಸ್ ರೈಲು. ಬೆಳಗ್ಗೆ ಆರು ಗಂಟೆಗೆ ಬೆಂಗಳೂರು ತಲುಪಬೇಕಿತ್ತು. ಗಂಡ್ಕಲ್ , ಅನಂತಪುರ, ಪೆನುಗೊಂಡ ಮಾರ್ಗವಾಗಿ ಬೆಂಗಳೂರು ತಲುಪಬೇಕಿತ್ತು. ಚಿಕ್ಕಜಾಜೂರು, ಬೀರೂರು ಅರಸಿಕೆರೆ ಮಾರ್ಗವಾಗಿ ಬರುತ್ತಿರುವ ರೈಲು, ದಿಢೀರ್ ಬದಲಾವಣೆಯಿಂದ ಮಾರ್ಗ ಮದ್ಯೆ ಕ್ರಾಸಿಂಗ್ ಗಳಿಂದ ಅಡಚಣೆಯುಂಟಾಗಿದೆ.
ರೈಲಿನಲ್ಲಿ ಪಯಣಿಸಿದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುವುದೇ ಅನುಮಾನ ಎನ್ನುತ್ತಿದ್ದರು. ರೈಲ್ವೇ ಅಧಿಕಾರಿಗಳ ಯಡವಟ್ಟಿನಿಂದ ವಿಧ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವಂತಾಗಿದೆ.