ಭೂವಿಜ್ಞಾನ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಮುನಿರತ್ನ ಅವರನ್ನ ತನಿಖೆಗೆ ಒಳಪಡಿಸುವಂತೆ ಕೆಪಿಸಿಸಿ ಕಾನೂನು ಘಟಕದ ಸೂರ್ಯ ಮುಕುಂದರಾಜ್ ಒತ್ತಾಯ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಪೊಲೀಸ್ ಇಲಾಖೆಗೆ ಒತ್ತಾಯ ಮಾಡಿದ್ದು,ಮಾಜಿ ಸಚಿವ ಮುನಿರತ್ನ ಮೇಲಿನ ಪ್ರಕರಣದ ಪತ್ರಗಳನ್ನು ಉಲ್ಲೇಖಿಸಿ ಪೊಸ್ಟ್ ಮಾಡಿದ್ದಾರೆ.ಹುಣಸೆಮಾರನಹಳ್ಳಿ ಬಳಿ ಪರವಾನಗಿ ಪಡೆಯದೆ ಬಂಡೆಗಳ ಸ್ಪೋಟಗೊಂಡಿದೆ.ಈ ಸಂಬಂಧ ವರದಿ ತಯಾರಿಸಿ ಕಳೆದ ಜುಲೈನಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರತಿಮಾ ವರದಿ ನೀಡಿದ್ದಳು.
ಹುಣಸಮಾರನಹಳ್ಳಿಯಲ್ಲಿ ಪರವನಾಗಿ ಇಲ್ಲದೆ ಕಲ್ಲು ಬಂಡೆಗಳನ್ನ ಸ್ಪೋಟಿಸಲಾಗಿದೆ.ಹಾಗೂ ಕಲ್ಲು ಸಾಗಾಟ ಮಾಡಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ರಾಜಧನ ನಷ್ಟ ಉಂಟು ಮಾಡಿದ್ದಾರೆ ಎಂದು ವರದಿಯಲ್ಲಿ ಮುನಿರತ್ನ ಬಗ್ಗೆ ಆರೋಪಿಸಲಾಗಿದೆ.ಈ ಸಂಬಂಧ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ಸಹ ದಾಖಲು ಮಾಡಲಾಗಿತ್ತು.ಈಗ ಪ್ರತಿಮಾ ಹತ್ಯೆಯಾಗಿದೆ.
ಪೊಲೀಸರು ಮುನಿರತ್ನಗು ನೋಟಿಸ್ ನೀಡಿ ವಿಚಾರಣೆಗೆ ಕರೆಯಬೇಕು.ಇವರನ್ನು ಕೂಡ ತನಿಖೆಗೆ ಒಳಪಡಿಸಬೇಕು ಅಂತಾ ಒತ್ತಾಯ ಮಾಡಿದ್ದಾರೆ.ಪೊಲೀಸರು ಒಂದು ಕೊಲೆ ಕೇಸಲ್ಲಿ ಹಲವು ಆಯಾಮಗಳಲ್ಲಿ ತನಿಖೆ ಮಾಡ್ತಾರೆ.ಈಗ ಈ ಒಂದು ಆಯಾಮದಲ್ಲೂ ಕೂಡ ತನಿಖೆ ನಡೆಸುವಂತೆ ಕೆಪಿಸಿಸಿ ಕಾನೂನು ಘಟಕದ ಸೂರ್ಯ ಮುಕುಂದರಾಜ್ ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ.