ಸರ್ಕಾರಿ ನೌಕರಿ ಮಿಸ್ ಆಗ್ತಿದೆ ಅಂತ ಪರಿತಪಿಸಿದ್ದ ಆರೋಪಿ ಕಿರಣ್ ನಾಲ್ಕುವರೆ ವರ್ಷದಿಂದ ಗಣಿ ಮತ್ತು ಭೂವಿಜ್ಞಾ ಅಧಿಕಾರಿ ಡ್ರೈವರ್ ಆಗಿದ್ದ .ನಾಲ್ಕುವರೆ ವರ್ಷದಿಂದ ಎಲ್ಲಾ ಮೈನಿಂಗ್ ಮತ್ತು ಕ್ರಷರ್ ಓನರ್ ಪರಿಚಯ ಮಾಡಿಕೊಂಡಿದ್ದ .ಕ್ರಷರ್ ಗೆ ಮತ್ತು ಗಣಿ ಜಾಗಕ್ಕೆ ವಿಸಿಟ್ ಮಾಡ್ತಿದ್ದಾಗ ಒಂದಷ್ಟು ಹಣ ಪಡೆಯುತ್ತಿದ್ದ .
ಸಂಬಳದ ಜೊತೆಗೆ ತಿಂಗಳ ಖರ್ಚಿಗೂ ಇದ್ರಿಂದ ಕಿರಣ್ ಗೆ ಹಣ ಸಿಕ್ತಿತ್ತು.ಇನ್ನೂ ಎರಡು ವರ್ಷ ಕೆಲಸ ಮಾಡಿದ್ರೆ ಕಿರಣ್ ಗುತ್ತಿಗೆ ಆಧಾರದಿಂದ ಖಾಯಂ ಆಗೋ ಸಾಧ್ಯತೆಯಿತ್ತು.ಇದೇ ಕಾರಣಕ್ಕೆ ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವಂತೆ ಪ್ರತಿಮಾಗೆ ದುಂಬಾಲು ಬಿದ್ದಿದ್ದ.ಕೊಲೆ ದಿನ ಪ್ರತಿಮಾ ಬರುವ ಮೊದಲೇ ಮನೆ ಬಳಿ ಕಾದು ಕುಳಿತಿದ್ದ.ಪ್ರತಿಮಾ ಬರ್ತಿದ್ದಂತೆ ಮತ್ತೆ ತನ್ನ ಕತೆ ಹೇಳಿ ಪರಿಪರಿಯಾಗಿ ಕಿರಣ್ ಬೇಡಿಕೊಂಡಿದ್ದ.
ಪ್ರತಿಮಾ ಒಪ್ಪದೆ ಕಿರಣ್ ಮೇಲೆ ಕೂಗಾಡಿದ್ರು.ನಂತರ ಪೊಲೀಸ್ ಗೆ ಕಾಲ್ ಮಾಡ್ತಿನಿ ಅಂದಿದ್ದರು.ಈ ವೇಳೆ ಪ್ರತಿಮಾ ವೇಲ್ ನಿಂದ ಕುತ್ತಿಗೆ ಕಟ್ಟಿ ಕೊಲೆ ಮಾಡಿದ್ದ.ನಂತರ ಅಡುಗೆಮನೆಯ ಚಾಕುವಿನಿಂದ ಪ್ರತಿಮಾ ಕುತ್ತಿಗೆ ಕೊಯ್ದು ಕಿರಣ್ ಎಸ್ಕೇಪ್ ಆಗಿದ್ದ.