ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಸಾಲಮನ್ನಾ ಯೋಜನೆಯಡಿ ಪ್ರಾಥಮಿಕ ಸಹಕಾರಿ ಸಂಘ ಗಳಿಗೆ ಅನ್ವಯವಾಗುವ ಸಾಲಮನ್ನಾ ಯೋಜನೆ ಜನರಿಗೆ ದಕ್ಕುತ್ತಿಲ್ಲ. ರೈತರಿಗೆ ಬಡ್ಡಿರಹಿತ ಸಾಲ ನೀಡುತ್ತಿದ್ದು, ಬಡ್ಡಿಯನ್ನು ರಾಜ್ಯಸರ್ಕಾರ ಭರಿಸುತ್ತಿದೆ. ಆದ್ರೆ ಈ ಬಡ್ಡಿಯ ಹಣ ಸಂಘಗಳಿಗೆ ಸರಿಯಾದ ಸಮಯದಲ್ಲಿ ಸಂದಾಯವಾಗುತ್ತಿಲ್ಲ ಎಂದು ಸಹಕಾರಿ ಸಂಘಗಳ ಒಕ್ಕೂಟ ಆರೋಪಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ತಾಲೂಕು ಪಂಚಾಯತ್ ಸಭಾಂಗಣಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಗೆ 297 ಕೋಟಿ ಬರಬೇಕಿದ್ದು,15 ತಿಂಗಳ ಅವಧಿಯಲ್ಲಿ 212 ಕೋಟಿ ಜಮೆಯಾಗಿದೆ. ಆದ್ರೆ ಸರ್ಕಾರದಿಂದ ಇನ್ನೂ 85 ಕೋಟಿ ಬರಬೇಕಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಆದಷ್ಟು ಬೇಗ 85 ಕೋಟಿ ಬೆಳೆ ಸಾಲದ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕೆಂಬ ಆಗ್ರಹ ಮಾಡಿತು. ಸಂಪೂರ್ಣ ಸಾಲಮನ್ನಾ ಆದಂತ ರೈತರಿಗೆ ಈಗ ಹೊಸ ಸಾಲ ಸಿಗುತ್ತಿಲ್ಲ. ಕರಾವಳಿಯ ಎಲ್ಲಾ ತಾಲೂಕು ಗಳೂ ಭತ್ತ ಪ್ರಧಾನ ಸಹಕಾರಿ ಸಂಘಗಳಾಗಿದ್ದರಿಂದ ಸಾಲಮನ್ನಾ ಅನ್ವಯವಾಗಿದೆ. ಮಲೆನಾಡಿನ ಹಲವಾರು ಸಂಘಗಳು ಅಡಿಕೆ ಪ್ರಧಾನ ಸಂಘಗಳಾಗಿದ್ದು ಅವುಗಳಿಗೆ ಬರಬೇಕಾದ ಸಾಲಮನ್ನಾ ಯೋಜನೆ ಇನ್ನೂ ಅನ್ವಯವಾಗಿಲ್ಲ. ಈಗಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಸಾಲಮನ್ನಾ ಅದೇಶವು ಸಂಪೂರ್ಣ ಗೊಂದಲಮಯ ವಾಗಿದ್ದು, ವಾರಕ್ಕೊಂದು ಸುತ್ತೋಲೆಗಳು ಬರುತ್ತಿವೆ. 70 ರಿಂದ 80 % ರೈತರಿಗೆ ಈ ಸಲದ ಸಾಲಮನ್ನಾ ಯೋಜನೆ ಸಿಗೋ ದಿಲ್ಲ. ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಮುರಿದು ಸಾಲಮನ್ನಾ ಮಾಡಿ ಅನ್ನೋ ಘೋಷಣೆಯಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈ ಮಾನದಂಡ ವನ್ನು ಸರಳೀಕರಣಗೊಳಿಸ
ಬೇಕು. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಕಡ್ಡಾಯವಾಗಿದ್ದು, 2195 ರೂಪಾಯಿ ಒಂದು ಎಕರೆಗೆ ಪ್ರೀಮಿಯಂ ತುಂಬುತ್ತಿದ್ದು, ಈ ವಿಮೆ ಜುಲೈ 7 ರಿಂದ ಆಗಸ್ಟ್ 31 ರ ಅವಧಿಗೆ ಮಾತ್ರ ಅನ್ವಯವಾಗುತ್ತಿದೆ.
ಆದ್ರೆ ಆ ಪ್ರದೇಶದ ವ್ಯಾಪ್ತಿಯಲ್ಲಿ 7 ದಿನ ನಿರಂತರ ಮಳೆಯಾದ್ರೆ ಮಾತ್ರ ಈ ವಿಮೆ ಸಿಗುತ್ತಿದ್ದು, ಎಲ್ಲ ರೈತರಿಗೂ ವಿಮೆ ಸಿಗುತ್ತಿಲ್ಲ. ಪ್ರೀಮಿಯಂ ತುಂಬಿದ ನಂತರದ ವಿಧಾನಗಳ ಬಗ್ಗೆ ಯಾರೂ ಕೂಡ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದೊಂದು ವಿಮಾ ಕಂಪನಿಗಳಿಗೆ ಹೊಟ್ಟೆ ತುಂಬಿಸುವ ಮೋಸದ ಜಾಲವಾಗಿದ್ದು, ಕೂಡಲೇ ಎಲ್ಲ ರೈತರಿಗೂ ಇದರ ಪ್ರಯೋಜನ ಸಿಗುವಂತೆ ಮಾಡಬೇಕು ಎಂದು ಅಗ್ರಹಿಸಿತು.