Publish Date: Fri, 05 Oct 2018 (16:52 IST)
Updated Date: Fri, 05 Oct 2018 (16:54 IST)
ಎರೆಡೆರಡು ಬಾರಿ ಇಂದಿರಾ ಕ್ಯಾಂಟೀನ್ ಗೆ ಉದ್ಘಾಟನೆ ಭಾಗ್ಯವನ್ನು ಪ್ರಭಾವಿ ಶಾಸಕ ನೀಡಿರುವ ಘಟನೆ ನಡೆದಿದೆ.
ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಪಾಟೀಲ ಒಂದೇ ಇಂದಿರಾ ಕ್ಯಾಂಟಿನ್ ಗೆ ಎರೆಡು ಬಾರಿ ಉದ್ಘಾಟನೆ ಭಾಗ್ಯ ಕರುಣಿಸಿದ್ದಾರೆ.
ಉದ್ಘಾಟನೆ ಹೆಸರಲ್ಲಿ ಹಣ ದುಂದು ವೆಚ್ಚ ಮಾಡಿದ ನಗರಸಭೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾರ್ಚ್ 27 ಕ್ಕೆ ಉದ್ಘಾಟನೆಗೊಂಡಿದ್ದ ಇಂದಿರಾ ಕ್ಯಾಂಟೀನ್ ನನ್ನು ಮತ್ತೆ ಇಂದು ಉದ್ಘಾಟನೆ ಮಾಡಲಾಗಿದೆ.
ಗದಗನ ಬೆಟಗೇರಿಯ ಮಾರುಕಟ್ಟೆಯಲ್ಲಿರುವ ಕ್ಯಾಂಟಿನ್ ಗೆ ಎರಡೆರಡು ಬಾರಿ ಉದ್ಘಾಟನೆ ಭಾಗ್ಯ ದೊರಕಿದಂತಾಗಿದೆ.
ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯ ಕೆಲವೇ ಕ್ಷಣ ಮುನ್ನ ಉದ್ಘಾಟನೆ ಆಗಿದ್ದ ಕ್ಯಾಂಟಿನ್ ಈಗ ಮತ್ತೆ ಉದ್ಘಾಟನೆಗೊಂಡಿದೆ.