Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಡವರ ಪಾಲಿನ ಇಂದಿರ್ ಕ್ಯಾಂಟಿನ್ ರಾಜ್ಯದೇಲ್ಲೇಡೇ ಓಪನ್ ಗೆ ಸಿದ್ದತೆ ,,!

ಬಡವರ ಪಾಲಿನ ಇಂದಿರ್ ಕ್ಯಾಂಟಿನ್ ರಾಜ್ಯದೇಲ್ಲೇಡೇ ಓಪನ್ ಗೆ ಸಿದ್ದತೆ ,,!
bangalore , ಸೋಮವಾರ, 12 ಜೂನ್ 2023 (20:10 IST)
ಒಂದು ಕಾಲದಲ್ಲಿ ಅದೆಷ್ಟೋ ಪಾಡಪಾಯಿ ಜನರ ಹೊಟ್ಟೆ ತುಂಬಿಸಿ, ಮಿಂಚಿದ ಇಂದಿರಾ ಕ್ಯಾಂಟೀನ್‌ಗಳು ಕಳೆದ ಬಿಜೆಪಿ ಸರ್ಕಾರದಲ್ಲಿ ತಮ್ಮ ಕಳೆಯನ್ನು  ಕಳೆದುಕೊಂಡಿತ್ತು, ಈಗ ನೂತನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಿನ ಇಂದಿರ್ ಕ್ಯಾಂಟಿನ್ ಬಾಗಿಲು ಬಂದ್ ಮಾಡಿದ ಬಿಜೆಪಿ ಸರ್ಕಾರಕ್ಕೆ  ಈಗ ಅಫ್ ಇಡೋದಕ್ಕೆ ಕಾಂಗ್ರೇಸ್ ಸರ್ಕಾರ ಮುಂದಾಗಿದೆ, ಬಡವರ ಪಾಲಿನ ಅನ್ನಪೂರ್ಣೇಶ್ವರಿ ಅಂತನ್ನೇ ಕರೆಸಿ ಕೋಳುತ್ತಿದ ಇಂದಿರ್ ಕ್ಯಾಂಟಿನ್ ಗೆ ಮತ್ತೆ ಮರು ಜೀವ ನೀಡೋದಕ್ಕೆ ಕಾಂಗ್ರೇಸ್ ಮುಂದಾಗಿದೆ.

ಸಿಎಂ ಸಿದ್ದರಾಮಾಯ್ಯನವರ ಕನಸಿನ ಇಂದಿರ್ ಕ್ಯಾಂಟಿನ್ ಗೆ ಎಳುನೀರು ಬಿಡಲು ಬಿಜೆಪಿ ಸರ್ಕಾರ ಪ್ಲಾನ್ ಮಾಡಿತ್ತು, ಈ ಮೊದಲು ಕ್ಯಾಂಟೀನ್ ಬಂದ್ ಮಾಡ್ತಿವಿ ಅಂತ ಬಿಜೆಪಿ ನಾಯಕ್ರು ಕೂಡ ಹೇಳಿದ್ರು, ಅದ್ರೆ ,,ಬಡವರ ಪಾಲಿನ ಅಕ್ಷಯ ಪಾತ್ರೆ ಬಗ್ಗೆ ಜನರು ವಿರೋಧ ವ್ಯಾಕ್ತಪಡಿಸಿದ್ರು, ಅಗ ಸುಮ್ಮನದ ಬಿಜೆಪಿ ಸರ್ಕಾರ ಮೊದಲ ಹಂತದಲ್ಲಿ ಕ್ಯಾಂಟೀನ್ ಗೆ ಸರ್ಕಾರದ ಅನುದಾನ ಸ್ಟಾಫ್ ಮಾಡಿತ್ತು, ನಂತರ ಕ್ಯಾಂಟಿನ್ ಗೆ ಸಪ್ಲೈ ಅಗುತ್ತಿದ ಕಾವೇರಿ ನೀರನ್ನೂ ಬಂದ್ ಮಾಡಿತ್ತು, ಹೀಗೆ ನಾನಾ ಕಾರಣಗಳನ್ನೂ ನೀಡುತ್ತ ಕ್ಯಾಂಟಿನ್ ಬಾಗಿಲು ಹಾಕಿಸೋದಕ್ಕೆ ಕುಂತಂತ್ರ ನಡೆಸಿ, ಸುಮಾರು 80 ಕ್ಕೂ ಹೆಚ್ಚು ಕ್ಯಾಂಟಿನ್ ಗಳನ್ನೂ ಬಂದ್ ಮಾಡಿದ್ವು,,,ಇನ್ನೂ  ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟಿನ್‌ಗಳಿದ್ದು, ಆರಂಭಗೊಂಡ ದಿನದಿಂದ ಪ್ರತಿ ನಿತ್ಯ ಮೂರುವರೆ ಲಕ್ಷ ಜನ ಊಟ,ತಿಂಡಿ ಮಾಡ್ತಿದ್ರು, ಅದ್ರೆ ಈಗ ಕೇವಲ 40 ಸಾವಿರದಿಂದ 30 ಸಾವರದವರೆಗೆ ಊಟ ,ತಿಂಡಿ ತಿನ್ನಳು ಬರ್ತಿದರೆ, ಶೇ.60 ರಷ್ಟು ಗ್ರಾಹಕರ ಇಳಿಕೆ ಕಂಡುಬಂದಿದೆ,ಆದ್ದರಿಂದ ಈಗ ಇಂದಿರಾ ಕ್ಯಾಂಟೀನ್ ‌ಮರು ಸ್ಥಾಪನೆಗೆ ‌ಸಿ.ಎಂ ರವರಿಂದ‌ ಅಧಿಕಾರಿಗಳಿಗೆ‌ ಮತ್ತೊಮ್ಮೆ ಹೊಸ ಟೆಂಡರ್ ಕೆರೆದು ಆಹಾರದಲ್ಲಿ ಕ್ವಾಲಿಟಿ ಮತ್ತು ಕ್ವಾಂಟಿಟಿ ಗುಣ್ಣಮಟ್ಟ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

 2023 ನೇ ಸಾಲಿನ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮತ್ತೆ ಇಂದಿರ್ ಕ್ಯಾಂಟಿನ್ ಓಪನ್ ಮಾಡ್ತಿವಿ ಅಂತ ಹೇಳಿಕೆ ನೀಡಿದ್ರು, ಅದರಂತೆ ನಡೆದಂತೆ ನುಡಿಯಲು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಿಗೆ ಮರು ಜೀವ ನೀಡೋದಕ್ಕೆ ಕಾಂಗ್ರೇಸ್ ಸರ್ಕಾರ ಮುಂದಾಗಿದೆ, ಜೊತೆಗೆ 243 ವಾರ್ಡ್ ಜೊತೆಗೆ 6 ಹೆಚ್ಚುವರಿ ಒಟ್ಟು ನಗರದಲ್ಲಿ 250 ಇಂದಿರಾ ಕ್ಯಾಂಟೀನ್ ತೆರೆಯಲು ಸರ್ಕಾರದಿಂದ ಅನುಮತಿ ಸಿಕ್ಕಿರುವಂತದ್ದು,ಇದರ ಜೊತೆಗೆ ಆಹಾರದ ಮೆನ್ ಪ್ಲನ್ ನೊಂದಿಗೆ ಮತ್ತೆ ನಗರದಲ್ಲಿ ಇಂದಿರಾ ಕ್ಯಾಂಟೀನ್ ತಲೆಯತ್ತಲಿವೆ.

ಬಡವರ ಪಾಲಿನ ಅಕ್ಷಯ ಪಾತ್ರೆ ಮುಗಿಸೋಕ್ಕೆ ಹೊರಟ್ಟಿದ್ದ ಬಿಜೆಪಿ‌ ಗೆ  ಬಡವರ ಶಾಪ ತಟ್ಟಿದೆ ಅಂತ ಕಾಣಿಸುತ್ತೆ, ಯಾಕಂದ್ರೆ ಈ ಬಾರಿ ಬಿಜೆಪಿ ಪಕ್ಷ ಹೀನಯವಾಗಿ ಸೋತಿರೋದೆ ಇದಕ್ಕೆ ಇದು ಒಂದು ನಿರ್ದೇಶನ ಆಗಿದೆ, ಇದೇನೇ ಇರಲಿ ಮತ್ತೆ  ಇಂದಿರಾ ಕ್ಯಾಂಟೀನ್ ಮರು ಜೀವ ಪಡಿಯುತ್ತಿರುವುದರಿಂದ ಜನರು ಬಹುಪರಾಕ್ ಅಂತೀದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬಲ್ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ಆಟೋ ಚಾಲಕ,,!