ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರಣಗಳಿಂದಾಗಿ ಭಾರತೀಯ ರೈಲ್ವೆ ಇಲಾಖೆ (Indian Railways) ಇಂದು (ಮಂಗಳವಾರ) 240ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆಯ (Railway Department) ಅಧಿಸೂಚನೆ ಪ್ರಕಾರ, ಇಂದು ಹೊರಡಬೇಕಿದ್ದ 211 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು 29 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಹಾಗೇ, ಇಂದಿನ 14 ರೈಲುಗಳ ವೇಳಾಪಟ್ಟಿಯನ್ನು ರೀಶೆಡ್ಯೂಲ್ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ದೆಹಲಿ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಂಜಾಬ್, ಅಸ್ಸಾಂ ಮತ್ತು ಬಿಹಾರದಲ್ಲಿ ಸಂಚರಿಸುತ್ತಿದ್ದ ರೈಲುಗಳು ರದ್ದಾಗಿವೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕು.ಇಂದು ಸಂಪೂರ್ಣವಾಗಿ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ ಹೀಗಿದೆ…