ಬೆಂಗಳೂರು:- ಬೆಳೆಯುತ್ತಿರುವ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಮತ್ತು ಡಾಟಾ ಸೆಂಟರ್ ಮಾರುಕಟ್ಟೆಯಲ್ಲಿ ಮೌಲ್ಯ ಪ್ರತ್ಯೇಕತೆಯನ್ನು ಸಾದರಪಡಿಸುವುದಕ್ಕಾಗಿ ಟೆಲಿ ಇಂಡಿಯಾ ನೆಟ್‍ವಕ್ರ್ಸ್ ತನ್ನ ಗ್ರೀನ್‍ಫೀಲ್ಡ್ ಹೈಪರ್‍ಸ್ಕೇಲ್ ಡಾಟಾ ಸೆಂಟರ್ ಆದ ಡಾಟಾಸಮುದ್ರವನ್ನು ಬೆಂಗಳೂರಿನಲ್ಲಿ ಶುಕ್ರವಾರ ಅನಾವರಣಗೊಳಿಸಲಾಗಿದೆ.
ಕರ್ನಾಟಕ ಸರ್ಕಾರ, ಕಾರ್ಪೋರೇಟ್ ಕ್ಷೇತ್ರ ಮತ್ತು ಟೆಲಿ ಇಂಡಿಯಾದ ಗ್ರಾಹಕರಲ್ಲಿ ಅಗ್ರ ಗಣ್ಯರು ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ; ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನಾಧಾರ, ಇಲಾಖೆಯ ಗೌರವಾನ್ವಿತ ಸಚಿವರಾದ ಡಾ. ಸಿ.ಎನ್. ಅಶ್ವಥ್‍ನಾರಾಯಣ್ ಮತ್ತು ಲೈಟ್ ಸ್ಟಾರ್ಮ್ ಟೆಲಿಕಾಮ್ ಕನೆಕ್ಟಿವಿಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಜಿತ್ ಗುಪ್ತಾ ಸಾಂಪ್ರದಾಯಿಕವಾಗಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಟೀ-ಫೈಬರ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ತೆಲಂಗಾಣ ಸರ್ಕಾರದ ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ಹಾಗೂ ಸಂವಹನ ಇಲಾಖೆ ನಿರ್ದೇಶಕರಾದ ಸುಜಯ್ ಕರಂಪುರಿ, ಸೀನಾ ಇಂಡಿಯಾದ ಉಪಾಧ್ಯಕ್ಷರು ಮತ್ತು ರಾಷ್ಟ್ರೀಯ ಮುಖ್ಯಸ್ಥರಾದ ಡಬ್ಲ್ಯು.ಎಲ್. ರ್ಯಾನ್ ಪೆರಾರ, ಸಿಸ್ಕೊ ಇಂಡಿಯಾ ಮತ್ತು ಸಾರ್ಕ್‍ನ ಅಧ್ಯಕ್ಷರಾದ ಡೈಸಿ ಚಿಟ್ಟಿಲಪಿಳ್ಳಿ, ರಮಣಶ್ರೀ ಹೋಟಲ್ಸ್ ಮತ್ತು ರೆಸಾಟ್ರ್ಸ್‍ನ ಚೇರ್ಮನ್ ಎಸ್. ಷಡಕ್ಷರಿ ಮತ್ತು ಸುಪ್ರಿಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಉಅಪಸ್ಥಿತರಿದ್ದರು.
ಡಾಟಾಸಮುದ್ರವನ್ನು ಉದ್ಘಾಟಿಸಿದ ಸಚಿವ ಅಶ್ವಥನಾರಾಯಣ್ ರಾಜ್ಯದ ಮಾಹಿತಿ ತಂತ್ರಜ್ಞಾನ ಕೈಗಾರಿಕೆಗೆ ಮೌಲ್ಯವರ್ಧನೆ ಕೈಗೊಳ್ಳುವುದಕ್ಕಾಗಿ ಹಾಗೂ ರಾಜ್ಯಕ್ಕೆ ಇಂತಹ ಯೋಜನೆಗಳನ್ನು ತರುವ ಅವಕಾಶಗಳ ಮೇಲೆ ಒತ್ತು ನೀಡಿದರು. ಉದ್ಯೋಗ ಸೃಷ್ಟಿ, ಜಾಗತಿಕವಾಗಿ ಗಮನ ಕೇಂದ್ರೀಕರಿಸುವುದು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ವ್ಯವಹಾರಗಳಿಗೆ ನೂತನ ಮಾರ್ಗಗಳನ್ನು ಸೃಷ್ಟಿಸುವುದು ಮುಂತಾದ ತಕ್ಷಣದ ಅವಕಾಶಗಳನ್ನು ಇಂತಹ ಯೋಜನೆಗಳು ತಂದುಕೊಡುತ್ತವೆ. ಅಂತಹ ಬೆಳವಣಿಗೆಗೆ ಡಾಟಾಸಮುದ್ರ ಪ್ರಮುಖ ಕೊಡುಗೆ ನೀಡಲಿದೆ ಎಂದು ಹೇಳಿದರು.
ಡಾಟಾಸಮುದ್ರದ ದೃಷ್ಟಿಕೋನವನ್ನು ಹಂಚಿಕೊಂಡ ಟೆಲಿ ಇಂಡಿಯಾ ಗ್ರೂಪ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎ ಮಹಾಂತೇಶ ಮಾತನಾಡಿ, ಡಿಜಿಟಲ್ ಟ್ರ್ಯಾನ್ಸ್‍ಪರ್ಮೇಶನ್ ಕ್ಲೌಡ್ ಮತ್ತು ಡಾಟಾ ಕ್ಷೇತ್ರಗಳಲ್ಲಿಯೇ ಭವಿಷ್ಯ ಅಡಗಿದೆ ಎಂದು ನಾವೆಲ್ಲರೂ ಅರಿತಿದ್ದೇವೆ. ಮಾರುಕಟ್ಟೆ ಒಲವುಗಳು ಮತ್ತು ಭವಿಷ್ಯದ ವ್ಯವಹಾರ ಪ್ರಸ್ತಾವನೆಗಳಿಗೆ ತಕ್ಕಂತೆ ನಮ್ಮ ಭವಿಷ್ಯದ ದೃಷ್ಟಿಕೋನವನ್ನು ಹೊಂದಿಸಿಕೊಳ್ಳುವಲ್ಲಿ ನಾವು ನಂಬಿಕೆ ಇಟ್ಟಿರುವುದರಿಂದ ಈ ಡಾಟಾ ಸೆಂಟರ್ ಸ್ಥಾಪನೆ ಕೈಗೊಳ್ಳುವುದು ನಮಗೆ ಸ್ವಾಭಾವಿಕವಾಗಿತ್ತು. ಡಾಟಾಸಮುದ್ರ ಎನ್ನುವುದು ನಮಗೆ ಸಾಂಪ್ರದಾಯಿಕ ಸೇವಾ ವ್ಯವಹಾರಗಳಿಂದ ಗ್ರಾಹಕ ಕೇಂದ್ರೀಕೃತ ಫಲಿತಾಂಶ ಆಧಾರಿತ ಮೌಲ್ಯ ಪ್ರಸ್ತಾವನೆ ಕಡೆಗೆ ಸಾಗುವ ಮೆಟ್ಟಿಲಾಗಿದೆ. ಮುಂಬರುವ ಸಮಯದಲ್ಲಿ ಭಾರತದ ವಿವಿಧ ಸ್ಥಳಗಳಿಗೆ ಡಾಟಾಸಮುದ್ರವನ್ನು ಬೆಳೆಸುವ ದೃಷ್ಟಿಕೋನವನ್ನು ನಾವು ಹೊಂದಿದ್ದೇವೆ ಎಂದರು.
ಡಾಟಾಸಮುದ್ರದ ವಿವರಣೆ:
ಡಾಟಾಸಮುದ್ರ ನೂತನ ಕೆಐಎಡಿಬಿ ಐಟಿ ಪಾರ್ಕ್‍ನಲ್ಲಿ ಇದ್ದು, ಇಲ್ಲಿಯೇ ಟೆಲಿ ಇಂಡಿಯಾ ಇತ್ತೀಚೆಗೆ ನಿರ್ಮಿಸಿದ ಕಾರ್ಪೋರೇಟ್ ಕ್ಯಾಂಪಸ್ ಕೂಡ ಇದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದು ಹತ್ತಿರವಾಗಿದೆ. ಗ್ರಾಹಕರಿಗೆ ಮತ್ತು ಪಾಲುದಾರರಿಗೆ ಪ್ರಯಾಣ ಅಥವಾ ಸಂಪರ್ಕಕ್ಕೆ ಸಡಿಲತೆ ಪೂರೈಸುವುದರೊಂದಿಗೆ ಹೆಚ್ಚುವರಿ ಲಾಭವನ್ನು ಈ ಸ್ಥಳ ನೀಡುತ್ತದೆ.
ಡಾಟಾಸಮುದ್ರ ಒಂದು ಲಕ್ಷ ಚದರ ಅಡಿ ನಿರ್ಮಿತ ಪ್ರದೇಶವನ್ನು ಹೊಂದಿದ್ದು, ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದೆ. ಈ ಸೌಲಭ್ಯ 500 ಹೈಡೆನ್ಸಿಟಿ ರ್ಯಾಕ್, 3 ಮೆಗಾ ವ್ಯಾಟ್ ಐಟಿ ಪವರ್‍ಲೋಡ್ ಜೊತೆಗೆ ಎಲ್ಲಾ ಭವಿಷ್ಯದ ಮಾಹಿತಿ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳಿಂದ ಕೂಡಿದ್ದು, ಸುಭದ್ರ ಮತ್ತು ನಂಬಿಕಾರ್ಹ ದತ್ತಾಂಶ ಕೇಂದ್ರ ಸೌಲಭ್ಯವಾಗಿದೆ. ಉನ್ನತಮಟ್ಟದ ಭದ್ರತೆ, 24/4 ಜಾಗತಿಕ ನೆಟ್‍ವರ್ಕ್ ಆಪರೇಷನ್ಸ್ ಸೆಂಟರ್ ಮತ್ತು ಜಾಗತಿಕ ಮಟ್ಟಗಳಿಗೆ ತಕ್ಕಂತಹ ಮೂಲಸೌಕರ್ಯ ಸಾದರಪಡಿಸುವ ಡಾಟಾಸಮುದ್ರ `ಕೋ-ಲೊಕೇಷನ್, ಹೋಸ್ಟಿಂಗ್ ಮತ್ತು ಕ್ಲೌಡ್ ಸರ್ವೀಸಸ್ ಅನ್ನು ತನ್ನ ಭಾರತದಲ್ಲಿನ ಮತ್ತು ಜಾಗತಿಕ ಗ್ರಾಹಕರಿಗೆ ಪೂರೈಸಲಿದೆ.
ಭಾರತದಲ್ಲಿ ದತ್ತಾಂಶ ಸಂರಕ್ಷಣೆ ನೀತಿ ಮತ್ತು ಲೋಕಲೈಸೇಷನ್ ನಿಯಮಗಳು ಅಂತಿಮ ಹಂತದಲ್ಲಿ ಇರುವಂತೆ ಮುಖ್ಯವಾದ ಡಾಟಾ ದಾಸ್ತಾನನ್ನು ಸ್ಥಳೀಯವಾಗಿರಿಸುವ ಸೇವೆಯಾದ “ಡಾಟಾ ರೆಸಿಡೆನ್ಸಿ ಆ್ಯಸ್ ಎ ಸರ್ವೀಸ್” ಎಂಬ ತನ್ನ ರೀತಿಯ ಮೊದಲ ಸೇವೆಯನ್ನು ಡಾಟಾಸಮುದ್ರ ಅಂತಾರಾಷ್ಟ್ರೀಯ ಗ್ರಾಹಕರಿಗೆ ನೀಡುವುದಲ್ಲದೇ ಅದನ್ನು ಭಾರತೀಯ ಉದ್ಯಮಗಳು ಮತ್ತು ವ್ಯಕ್ತಿಗಳಿಗೆ ವಿಸ್ತರಿಸಲಿದೆ. ಬದಲಾವಣೆ ತರುವ ತಂತ್ರಜ್ಞಾನಗಳಲ್ಲಿ ನಾಲ್ಕು ಗಳೆನಿಸಿದ ಆಟೋಮೇಷನ್(ಸ್ವಯಂಚಾಲನೆ), ಅನಾಲಿಟಿಕ್ಸ್(ವಿಶ್ಲೇಷಣೆ), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಕೃತಕ ಬುದ್ಧಿವಂತಿಕೆ), ಆಗ್‍ಮೆಂಟೇಟಿವ್(ವರ್ಧನಾತ್ಮಕ) ಕ್ಷೇತ್ರಗಳಲ್ಲಿ ಗಮನ ಕೇಂದ್ರೀಕರಿಸುವುದರೊಂದಿಗೆ ಡಾಟಾಪ್ರತ್ಯೇಕ ಕ್ಲೌಡ್‍ಸೇವೆಗಳನ್ನು ಪೂರೈಸುವ ಉದ್ದೇಶವನ್ನು ಡಾಟಾಸಮುದ್ರ ಹೊಂದಿದೆ.