ರಾಜ್ಯದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.ಹೀಗಾಗಿ ಆರೋಗ್ಯ ಇಲಾಖೆಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಮಾಸ್ಕ್ ಧರಿಸದವರಿಗೆ ದಂಡ ಹಾಕುವಂತೆ ಸಲಹೆ ನೀಡಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದರೂ ಕೆಲವು ಕಡೆ ಪಾಲನೆ ಆಗುತ್ತಿಲ್ಲ.ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕಿ ಪೊಲೀಸರು, ಸ್ಥಳೀಯ ಸಂಸ್ಥೆಗಳ ಸಹಾಯದಿಂದ ನಿಯಮ ಜಾರಿಗೆ ತೆಗೆದುಕೊಂಡು ಬರುವಂತೆ ಆದೇಶಿಸಿದ್ದಾರೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿ ದಿನ 700ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿದೆ.ರಾಜಧಾನಿಯಲ್ಲೇ 33 ಕಂಟೈನ್ಮೆಂಟ್ ವಲಯಗಳಿವೆ. ಆದ್ರು ಕೇಸಸ್ ಹೆಚ್ಚಾಗ್ತಿದೆ. ಹೀಗಾಗಿ ಈ ಕಾರಣಕ್ಕಾಗಿಯೇ ಮುಂದೆ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ ಎಂಬ ನಿಯಮ ಜಾರಿಯಾಗುವ ಸಾದ್ಯತೆ ಇದೆ.