ಅದು ನಿನ್ನೆ ತಡರಾತ್ರಿ 11 ಗಂಟೆಯ ಸಮಯ.ನಗರದ ಮೆಯೊಹಾಲ್ ರಸ್ತೆ ರಣಾಂಗಣವಾಗಿತ್ತು.ಹೋರಟ ಅಂತಾ ರಸ್ತೆಗಿಳಿದಿದ್ದ ಕನ್ನಡಪರ ಸಂಘಟನೆ ಕಾರ್ಯಕರ್ತರಿಗೆ ಹಿಗ್ಗಾಮುಗ್ಗ ಥಳಿಸಲಾಗ್ತಿತ್ತು.ಲೈವ್ ಬ್ಯಾಂಡ್ ಸಿಬ್ಬಂದಿ ಅಟ್ಟಾಡಿಸಿಹೊಡಿತಿದ್ರು.ಏನು ಅಂತಾ ವಿಚಾರಿಸಲು ಹೋದಾಗಲೇ ಗೊತ್ತಾಗಿದ್ದು ನೈತಿಕ ಪೊಲೀಸ್ ಗಿರಿಯ ಕಹಾನಿ.ಅದು ತಡ ರಾತ್ರಿಯ ಸಮಯ..ಅಲ್ಲಿ ಹತ್ತಾರು ಜನ ಸೇರಿದ್ರು..ತಮಟೆ ಬಾರಿಸ್ತಾ ಘೋಷಣೆ ಕೂಗ್ತಿದ್ರು.ನೋಡ್ದೋರು ಇದ್ಯಾವ್ದೋ ಹಬ್ಬನೋ ಜಾತ್ರ ಮಹೋತ್ಸವನೋ ಇರ್ಬೇಕು ಅನ್ಕೋಬೇಕು..ಕೆಲವೇ ಕೆಲವು ಹೊತ್ತು ಕಳಿತಿದ್ದಂತೆ ಸೀನ್ ಚೇಂಜ್..ಹರಿದ ಬಟ್ಟೆಯಲ್ಲಿ ಒಂದಷ್ಟು ಜನ ಓಡ್ತಿದ್ರೆ..ಮತ್ತೊಂದಷ್ಟು ಜನರನ್ನ ರಸ್ತೆ ಮೇಲೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಲಾಗ್ತಿತ್ತು.
ಅದು ರಾತ್ರಿ 11 ರಿಂದ 12 ಗಂಟೆ ಸಮಯ..ಬೆಂಗಳೂರಿನ ಮೆಯೋಹಾಲ್ ರಸ್ತೆ..ಲೈವ್ ಬ್ಯಾಂಡ್ ಅನಧಿಕೃತವಾಗಿ ನಡೀತಿದೆ.ಅಕ್ರಮ ಚಟುವಟಿಕೆಗಳ ತಾಣವಾಗಿದೆ.ಅಂತಹ ಲೈವ್ ಬ್ಯಾಂಡ್ ವಿರುದ್ಧ ಕ್ರಮ ಜರುಗಿಸಬೇಕು..ಹೀಗೆ ಹತ್ತಾರು ಘೋಷಣೆ ಕೂಗುತ್ತಾ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಸಂಘಟನೆ ರಸ್ತೆಗಿಳಿದಿತ್ತು.ಪೊಲೀಸರ ಅನುಮತಿ ಪಡೆಯದೆಯೇ ಲೈವ್ ಬ್ಯಾಂಡ್ ವಿರುದ್ಧ ಸಮರ ಸಾರಿದ್ರು.ನೈತಿಕ ಪೊಲೀಸ್ ಗಿರಿ ಮಾಡ್ತಾ ಲೈವ್ ಬ್ಯಾಂಡ್ ಮುಂದೆ ಧರಣರಿ ಕೂತಿದ್ರು.ತಮಟೆ ಹೋಡೆಯುತ್ತಾ ಲೈವ್ ಬ್ಯಾಂಡ್ ಗಳನ್ನ ಮುಚ್ಚುವಂತೆ ಘೋಷಣೆ ಕೂಗಿದ್ರು..ಇದ್ಹಾಗಿ ಕೆಲವೇ ಕೆಲವು ಹೊತ್ತಲ್ಲಿ ಸೀನ್ ಚೇಂಜ್ ಆಗಿತ್ತು.ಲೈವ್ ಬ್ಯಾಂಡ್ ಸಿಬ್ಬಂದಿ ಮತ್ತು ಸಂಘಟನೆ ಸದಸ್ಯರ ಮಧ್ಯೆ ಮಾರಾಮಾರಿಯೇ ನಡೆದುಹೋಯ್ತು
ರಸ್ತೆ ರಣಾಂಗಣವಾಗಿತ್ತು.ಆಶೋಕನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಗುಂಪನ್ನು ಮನವೊಲಿಸೊ ಕೆಲಸ ಮಾಡಿದ್ರು.ಆದ್ರೆ ಪರಿಸ್ಥಿತಿ ಅಷ್ಟಕ್ಕೆ ತಿಳಿಯಾಗಲಿಲ್ಲ.ಜಗಳ..ಪರಸ್ಪರ ವಾಗ್ವಾದ ಹೆಚ್ಚಾಗಿತ್ತು..ಲೈವ್ ಬ್ಯಾಂಡ್ ಸಿಬ್ಬಂದಿ ಸಂಘಟನೆ ಸದಸ್ಯರ ಮೇಲೆ ಮುಗಿಬಿದ್ದಿದ್ರು..ರಸ್ತೆಗೆ ಎಳೆದು ಹಿಗ್ಗಾಮುಗ್ಗಾ ಥಳಿಸಿದ್ರು..ಬಟ್ಟೆ ಹರಿದು ಅಟ್ಟಾಡಿಸಿದ್ರು..ಘಟನೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ಕೆಲ ಸಂಘಟನೆ ಸದಸ್ಯರು ಓಡಿಹೋದ್ರು.ಸದ್ಯ ಲೈವ್ ಬ್ಯಾಂಡ್ ಸಿಬ್ಬಂದಿ ಮಾತ್ರ ನಾವು ನಿಯಮದ ಪ್ರಕಾರವೇ ಕೆಲಸ ಮಾಡ್ತಿದ್ಧೀವಿ.ಸುಖಾ ಸುಮ್ನೆ ಬಂದರೆ ತೊಂದರೆ ಕೊಡ್ತಿದ್ದಾರೆ ಎಂದು ಆರೋಸ್ತಿದ್ದಾರೆ.ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು.ಇಷ್ಟೆಲ್ಲ ಹೈಡ್ರಾಮ ಸೃಷ್ಟಿಯಾದರೂ ಯಾವುದೇ ದೂರು ದಾಖಲಾಗದೇ ಇರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ