ಮ್ಯಾಟ್ರಿಮೋನಿ ವೆಬ್ಸೈಟ್ವೊಂದರಲ್ಲಿ ಪರಿಚಯವಾಗಿದ್ದ ಯುವತಿ ಖಾಸಗಿ ಕಂಪನಿಯ ಉದ್ಯೋಗಿಗೆ ಬರೋಬ್ಬರಿ 3.45 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ.
ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪರಿಚಯವಾದ ಶಿಲ್ಪಾ ಎಂಬ ಯುವತಿ ಧನಂಜಯ್ಗೆ ವಂಚನೆ ಮಾಡಿದ್ದಾಳೆ. ನ್ಯಾಯಕ್ಕಾಗಿ ಧನಂಜಯ್ ಗಿರಿನಗರ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾನೆ.
ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಸಹೋದರಿನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕಿದೆ ಎಂದು ಹಣ ನೀಡುವಂತೆ ಯುವತಿ ಬೇಡಿಕೆಯಿಟ್ಟಿದ್ದಾಳೆ.
ಇದನ್ನು ನಂಬಿದ ಧನಂಜಯ್ 3.45 ಲಕ್ಷ ಹಣವನ್ನು ಶಿಲ್ಪಾ ಅವರ ಖಾತೆಗೆ ವರ್ಗಾಯಿಸಿದ್ದಾನೆ. ಹಣ ಪಡೆದ ಕೆಲ ದಿನಗಳ ಬಳಿಕ ಯುವತಿ ಮೊಬೈಲ್ ಸ್ವಿಚ್ ಆಪ್ ಮಾಡಿ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಧನಂಜಯ್ ವಿವರಿಸಿದ್ದಾನೆ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.