ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣದಲ್ಲಿ ರಾಜಕಾರಣಿಗಳು ಶಾಮೀಲಾಗಿರುವ ಆರೋಪ ಕೇಳಿಬಂದಿದೆ.
ಕಂಪೆನಿ ಜೊತೆ ರಾಜಕಾರಣಿಗಳ ಹೆಸರನ್ನು ಬಿತ್ತರಿಸಲಾಗಿದೆ. ಮೇಲ್ಮನೆ ಸದಸ್ಯ ರಘು ಆಚಾರ್ ಈ ಕುರಿತು ಶಾಸಕರ ಭವನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ರಾಜಕಾರಣಿಗಳು ಅಂದರೆ ಪ್ರೋಗ್ರಾಮ್ ಗಳಿಗೆ ಹೋಗಬೇಕಾಗುತ್ತದೆ. ರಾಜಕಾರಣಿಗಳ ಬಗ್ಗೆ ತಪ್ಪು ಸಂದೇಶ ಜನರಿಗೆ ಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಸುಮಾರು ಜನ ಈ ಕಂಪೆನಿಯಲ್ಲಿ ಹಣ ಕಳೆದುಕೊಂಡಿದ್ದಾರೆ.
ಗೃಹಮಂತ್ರಿಗಳು ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಇಷ್ಟು ದಿನ ನಮ್ಮ ಇನ್ವೆಸ್ಟಿಗೇಷನ್ ಡಿಪಾರ್ಟಮೆಂಟ್ ಹಾಗೂ ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು? ರಾಜಕಾರಣಿಗಳು ಇದರಲ್ಲಿ ತಳಕುಹಾಕಿಕೊಂಡಿರುವುದರಿಂದ ಸಿಬಿಐ ತನಿಖೆಗೆ ಇದನ್ನು ಒಪ್ಪಿಸಬೇಕು. ವಿರೋಧ ಪಕ್ಷಕೂಡ ಇದರಲ್ಲಿ ಕೈಜೋಡಿಸಬೇಕು ಎಂದು ಆಗ್ರಹ ಮಾಡಿದರು.
ಬಲಿಷ್ಠರು ತಪ್ಪಿಸಿಕೊಂಡು ಅಮಾಯಕರು ಇಂತಹ ಪ್ರಕರಣಗಳಲ್ಲಿ ಸಿಲುಕು ಹಾಕಿಕೊಳ್ಳುತ್ತಿದ್ದಾರೆ. ಸಿ ಎಲ್ ಪಿ ನಾಯಕರು, ಸಿಎಂ, ಡಿಸಿಎಂ ವಿರೋಧ ಪಕ್ಷದವರನ್ನು ಒಲಿಸಿ ಸಿಬಿಐ ತನಿಖೆಗೆ ಒಪ್ಪಿಸಬೇಕು. ಸ್ಥಳೀಯ ಪೊಲೀಸರಿಗೆ ಇಂಟಲ್ಜೆನ್ಸಿಗೆ ಇದು ಗೊತ್ತಿರಲಿಲ್ಲಾ? ಸ್ಥಳೀಯ ಪೊಲೀಸರನ್ನು ಆದಷ್ಟು ಬೇಗ ಅಮಾನತ್ತುಗೊಳಿಸಬೇಕು ಎಂದು ರಘು ಆಚಾರ್ ಒತ್ತಾಯ ಮಾಡಿದ್ರು.
ಇಲ್ಲಿ ಯಾವ ಸರ್ಕಾರ ಎನ್ನುವ ಪ್ರಶ್ನೆಯಲ್ಲ. ಗ್ರಾಮವಾಸ್ತವ್ಯ ಮಾಡಿ ಹಳ್ಳಿಗಳ ಸುಧಾರಣೆ ಮಾಡಲು ಸಿಎಂ ಹೊರಟಿದ್ದಾರಲ್ಲ. ಅವರು ಬೆಂಗಳೂರನ್ನು ಸರಿಪಡಿಸಲಿ ಮೊದಲು ಎಂದು ರಘು ಆಚಾರ್ ಕಿಡಿಕಾರಿದ್ದಾರೆ.