Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ರಮ ಮರಳು, ಕಲ್ಲು ಸಂಗ್ರಹ : ಸ್ಥಳದಿಂದ ಕಾಲ್ಕಿತ್ತ ತಹಶೀಲ್ದಾರ್?‍

ಅಕ್ರಮ ಮರಳು, ಕಲ್ಲು ಸಂಗ್ರಹ : ಸ್ಥಳದಿಂದ ಕಾಲ್ಕಿತ್ತ  ತಹಶೀಲ್ದಾರ್?‍
ಚಿತ್ರದುರ್ಗ , ಶನಿವಾರ, 10 ಆಗಸ್ಟ್ 2019 (17:34 IST)
ಅಕ್ರಮ ಮರಳು ಮತ್ತು ಕಲ್ಲುಗಳನ್ನು ಸ್ಟಾಕ್ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ ಒಬ್ಬರು ಏಕಾಏಕಿಯಾಗಿ ದೂರು ನೀಡಿದ ವ್ಯಕ್ತಿಯನ್ನೇ ಬೈದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಅಕ್ರಮವಾಗಿ ಮರಳು, ಕಲ್ಲು ಸಂಗ್ರಹ ಮಾಡಿದ್ದ ಸ್ಥಳಕ್ಕೆ ಚಿತ್ರದುರ್ಗದ ತಹಶೀಲ್ದಾರ್ ಕಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿತ್ತು. ಆದ್ರೆ ಸ್ಥಳಕ್ಕೆ ಕರೆಸಿದ ವ್ಯಕ್ತಿಗೆ ದಬಾಯಿಸಿ ಕಾರ್‍ ಹತ್ತಿ ಸ್ಥಳದಿಂದ ಕಾಲ್ಕಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ಬಗ್ಗೆ ಕಂದಾಯ ಅಧಿಕಾರಿಗಳು ಕೆಲಸ ಮಾಡ್ತಾರೆ. ನೀವು ನನಗೆ ಹೇಳೋದು ಬೇಡ ಎಂದ ತಹಶೀಲ್ದಾರ್ ದೂರು ನೀಡಿದ ವ್ಯಕ್ತಿಗೆ ದಬಾಯಿಸಿದ್ದಾರೆ ಎನ್ನಲಾಗಿದೆ.

ಈ ಘಟನೆ ಚಿತ್ರದುರ್ಗ ಹಿಲ್ಲೆಯ ಜಾನುಕೊಂಡ ಗ್ರಾಮದಲ್ಲಿ ನಡೆದಿದೆ.

ಖಾಸಗೀ  ಜಾಗದಲ್ಲಿ ಸುಮಾರು 40ಲೋಡ್ ಮರಳನ್ನು ಡಂಪ್ ಮಾಡಲಾಗಿದೆ. ಈ ವಿಷಯವನ್ನು ಶಿವಕುಮಾರ್ ಎಂಬುವರು ಗಮನಿಸಿ ಫೋನ್ ಮಾಡಿ ತಹಶೀಲ್ದಾರಿಗೆ ಮೌಖಿಕ ದೂರು ನೀಡಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ತೂಗು ಸೇತುವೆ ಭಾರೀ ಪ್ರವಾಹಕ್ಕೆ ನೀರು ಪಾಲು