Publish Date: Fri, 28 Apr 2023 (18:10 IST)
Updated Date: Fri, 28 Apr 2023 (18:45 IST)
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಅಕ್ರಮವಾಗಿ ಬಸ್ನಲ್ಲಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.. 50 ಸಾವಿರ ಮೌಲ್ಯದ ಮದ್ಯ, ಮದ್ಯ ಸಾಗಿಸುತ್ತಿದ್ದ ಬಸ್ ಹಾಗೂ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳ ಹದ್ದಿನ ಕಣ್ಣಿನ ನಡುವೆಯೂ ಈ ಚಾಲಾಕಿಗಳು ಅಕ್ರಮವಾಗಿ ಮದ್ಯ ಸಾಗಾಟ ಮಾಡ್ತಿದ್ರು.. ಬಸ್ ಚಾಲಕ ಸೆಲ್ವಕುಮಾರ್ ಹಾಗೂ ಬಸ್ ಕಂಡಕ್ಟರ್ ಕೆ. ರಾಜಕುಮಾರ್ ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.