ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಿಎಂ ಹೇಮಂತ್ ಸೊರೇನ್ ಅವರ ಹಾಗೇ ಕಳಪೆ ಮಾದರಿಗಳನ್ನು ಅನುಕರಿಸದೆ ಮೌಲ್ಯಯುತ ರಾಜಕಾರಣಕ್ಕೆ ಅನುಗುಣವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ್ ಹೇಳಿದರು.
ಹೈಕೋರ್ಟ್ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿ ಪ್ರಾಸಿಕ್ಯೂಶನ್‌ಗೆ ವಿಚಾರಣೆಗೆ ಗುರಿಪಡಿಸಿಬೇಕೆಂದು ಅವಕಾಶ ಮಾಡಿಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಒಳ್ಳೆಯ ಮೇಲ್ಪಂಕ್ತಿ ಹಾಕಿಕೊಡಬೇಕೆಂದು ಕೇಳಿಕೊಂಡರು. ಅಂದು ನಾನು ಸಿದ್ದರಾಮಯ್ಯ ಅವರಿಗೆ ಗಿಳಿಗೆ ಬುದ್ಧಿ ಹೇಳಿದ ಹಾಗೇ ಹೇಳಿದ್ದೆ. ತಮ್ಮ ಪತ್ನಿ ಹೆಸರಿನಲ್ಲಿ ಅಕ್ರಮವಾಗಿ ಮಾಡಿಕೊಂಡ 14 ಸೈಟ್‌ಗಳನ್ನು ಸೆರೆಂಡರ್ ಮಾಡಿ ಈ ಪ್ರಕರಣವನ್ನು ತನಿಖೆಗೆ ಆದೇಶ ಮಾಡಿ ಕೊಡಿ ಎಂದು ಹೇಳಿದ್ದೆ. ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಅವರ ಸುತ್ತ ಮುತ್ತಲಿನವರ ಮಾತು ಕೇಳಿ ಇಂದು ಸಂಕಷ್ಟದಲ್ಲಿದ್ದಾರೆ.
ಅಂದು ಸಿದ್ದರಾಮಯ್ಯನವರು ಸೈಟ್‌ಗಳನ್ನು ಸೆರೆಂಡರ್ ಮಾಡಿ ತನಿಖೆಗೆ ಒಪ್ಪಿಸುತ್ತಿದ್ದರೆ ಇಂದು ಎಲ್ಲ ಪಕ್ಷದಲ್ಲಿರುವ ಕಳ್ಳರು ಸಿಕ್ಕಿ ಬೀಳುತ್ತಿದ್ದರು. ಸಿದ್ದರಾಮಯ್ಯ ಒಬ್ಬರಿಗೆ ಈ ಕಳಂಕ ಬರುತ್ತಿರಲಿರ್ಲಿಲ್ಲ ಎಂದರು.