Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿಕ್ಕಮಗಳೂರು ನಗರಸಭೆ ಮುಂದಾಗಿದೆ. ಗೋ ಹತ್ಯೆ, ಗೋ ಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ತಮಿಳು ಕಾಲೋನಿಯ ಯಶ್ ಪಾಲ್ ಎಂಬುವರಿಗೆ ಸೇರಿದ ಮನೆಯಲ್ಲಿ ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾಡಲಾಗ್ತಿತ್ತು. ಗೋ ಹತ್ಯೆ ಮಾಡುತ್ತಿದ್ದ ಮನೆಯ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಮನೆಯ ದಾಖಲೆಗಳನ್ನ ರದ್ದು ಮಾಡಿ, ನಗರಸಭೆ ಆಸ್ತಿ ಎಂದು ಪರಿವರ್ತನೆ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಸಹ ಗೋ ಹತ್ಯೆ ಮಾತ್ರ ನಿಂತಿಲ್ಲ. ಇದರಿಂದ ರೋಸಿ ಹೋದ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಉತ್ತರ ಪ್ರದೇಶದ ಯೋಗಿ ಮಾದರಿಯ ಆಡಳಿತಕ್ಕೆ ಚಿಕ್ಕಮಗಳೂರು ನಗರಸಭೆ ಮುಂದಾಗಿದ್ದು, ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.