Publish Date: Mon, 13 Nov 2017 (18:48 IST)
Updated Date: Mon, 13 Nov 2017 (18:50 IST)
ನಾನು ಹುಲಿಯೂ ಅಲ್ಲ, ಇಲಿಯೂ ಅಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.
ವಿಧಾನಪರಿಷತ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಮಧ್ಯೆ ಸ್ವಾರಸ್ಯಕರ ಚರ್ಚೆ ನಡೆದು ಕೆಲ ಕಾಲ ನಗುವಿನ ವಾತಾವರಣ ನಿರ್ಮಿಸಿತು.
ಬಿಜೆಪಿ ಶಾಸಕರೊಬ್ಬರು ಜಾರ್ಜ್ ಪ್ರಭಾವಿ ಸಚಿವ ಎಂದು ಹೇಳಿದಾಗ ಮಧ್ಯಪ್ರವೇಶಿಸಿದ ಸಿಎಂ ನೀವು ಪ್ರಭಾವಿಯಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಶಾಸಕನ ನೆರವಿಗೆ ಬಂದ ಈಶ್ವರಪ್ಪ ಪಾಪ ಇಲಿಯ ಮೇಲೆ ಮುಗಿಬೀಳುತ್ತಿದ್ದೀರಾ?ಎಂದು ಹೇಳಿದರು. ಶಾಸಕರನ್ನು ಇಲಿಯೆನ್ನುವುದು ಸರಿಯಲ್ಲ ಎಂದು ಸಿಎಂ ತಿರುಗೇಟು ನೀಡಿದರು.
ಹಾಗಾದ್ರೆ ನೀವು ಹುಲಿಯಾ?ಈಶ್ವರಪ್ಪ ಸಿಎಂ ಅವರನ್ನು ಪ್ರಶ್ನಿಸಿದಾಗ, ನಾನು ಹುಲಿಯೂ ಅಲ್ಲ, ಇಲಿಯೂ ಇಲ್ಲ. ಮಾನವೀಯತೆಯನ್ನು ಗೌರವಿಸುವ ವ್ಯಕ್ತಿ ಎಂದು ಮರುತ್ತರ ನೀಡಿದಾಗ ಸದನ ನಗೆಗಡಲಲ್ಲಿ ತೇಲಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.