ವಿಐಪಿ ಸಂಸ್ಕೃತಿ ತೆಗೆದುಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಂಪುಗೂಟದ ಕಾರು ಬಳಕೆ ನಿಷೇಧಿಸಿದೆ. ಕೇಂದ್ರಸರ್ಕಾರದ ಆದೇಶ ಇವತ್ತಿನಿಂದ ಅಧಿಕೃತವಾಗಿ ಜಾರಿಗೆ ಬರುತ್ತಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಸಚಿವ ಯು.ಟಿ. ಖಾದರ್ ನಾನು ಕೆಂಪು ದೀಪ ತೆಗೆಯುವುದಿಲ್ಲ ಎಂದಿದ್ದಾರೆ.
ಕೆಂಪುಗೂಟ ನನ್ನ ತಲೆಮೇಲಿಲ್ಲ, ನನ್ನ ಕಾರಿನ ಮೇಲಿದೆ. ತಲೆಯ ಮೇಲಿದ್ದರೆ ತೆಗೆದುಬಿಡಬಹುದಿತ್ತು. ರಾಜ್ಯಸರ್ಕಾರ ನಮಗೆ ಕಾರು ಕೊಟ್ಟಿರುವುದು. ಅಲ್ಲಿಂದ ಯಾವುದೇ ಆದೇಶ ಬಂದಿಲ್ಲ ಎಂಬರ್ಥದಲ್ಲಿ ಯು.ಟಿ. ಖಾದರ್ ಉತ್ತರಿಸಿದ್ದಾರೆ.
ಆದರೆ, ಇತ್ತೀಚೆಗೆ ಸಂಸದ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿಯ್ಲಿ ಸಂಚರಿಸುತ್ತಿದ್ದಾಗ ತಮ್ಮ ಕಾರಿನಿಂದ ಕೆಂಪುಗೂಟ ತೆಗೆದಿದ್ದರು. ಹೀಗಾಗಿ, ಕಾಂಗ್ರೆಸ್`ನವರೇ ಆದ ಇಬ್ಬರೂ ನಾಯಕರು ವಿಭಿನ್ನ ನಿರ್ಧಾರ ಗೊಂದಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ