Publish Date: Tue, 25 Jan 2022 (16:11 IST)
Updated Date: Tue, 25 Jan 2022 (19:13 IST)
ವಿಧಾನ ಸಭೆ ಒಳಗೆ ಏನು ಹೇಳಿದ್ರು ಒಮ್ಮೆ ಸಿದ್ದರಾಮಯ್ಯ ಜ್ಞಾಪಿಸಿಕೊಳ್ಳಲಿ. ಟೇಬಲ್ ಕುಟ್ಟಿ ಹೇಳಿದ್ರು. ಯಾವುದೇ ಕಾರಣಕ್ಕೂ ಈ ದ್ರೋಹಿಗಳನ್ನ ಸೇರ್ಪಡೆ ಮಾಡಿಕೊಳ್ಳಲ್ಲ ಎಂದಿದ್ರು. ಈಗ ಯಾಕೆ ಬೇಕು ಇವರಿಗೆ.ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋಕೆ ಮತ್ತೆ ಕರೆಯುತ್ತಿದ್ದಾರಾ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮತ್ತೆ ಬೊಮ್ಮಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರುತ್ತೆ ಎಂದು ಸಿದ್ದರಾಮಯ್ಯಗೆ ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ. ನನ್ನ ಜತೆ 36 ಜನ ಇದ್ರು, 17 ಜನ ನನ್ನ ಜತೆ ಬಂದ್ರು ಇನ್ನು ಇದೇ ವೇಳೆ ರಮೇಶ್ ಜಾರಕಿಹೊಳಿ, ನನ್ನ ಜತೆ 36 ಜನ ಇದ್ರು,
17 ಜನ ನನ್ನ ಜತೆ ಬಂದ್ರು ತಾಂತ್ರಿಕ ಕಾರಣದಿಂದ ಅಲ್ಲಿಯೇ ಇದ್ದಾರೆ. ಆ ಸಂದರ್ಭದಲ್ಲಿ ನಮ್ಮ ಜತೆ ಬರಲಿಲ್ಲ. ಕಾಂಗ್ರೆಸ್ ನ 16 ಶಾಸಕರು ನನ್ನ ಸಂಪರ್ಕದಲ್ಲಿರುವುದು ನಿಜ. ಬಿಜೆಪಿ ಹೈಕಮಾಂಡ್ ಒಪ್ಪಿದರೆ ಅವರನ್ನು ಪಕ್ಷಕ್ಕೆ ಕರೆತರುವೆ. ಜೆಡಿಎಸ್ನ ಮೂವರು ಶಾಸಕರು ಕೂಡ ಸಂಪರ್ಕದಲ್ಲಿದ್ದಾರೆ. ಕುಮಾರಸ್ವಾಮಿ ಒಳ್ಳೆಯವರು, ಜೆಡಿಎಸ್ನವರನ್ನು ಸೆಳೆಯಲ್ಲ. ಬೆಳಗಾವಿ ಜಿಲ್ಲೆಯ ಮೂವರು ಶಾಸಕರು ಸಂಪರ್ಕದಲ್ಲಿದ್ದಾರೆ. ಮೂವರ ಪೈಕಿ ಇಬ್ಬರು ಬಿಜೆಪಿಗೆ ಬಂದರೆ ಅಭ್ಯಂತರವಿಲ್ಲ. ಅವನೊಬ್ಬ ಬಿಜೆಪಿಗೆ ಬಂದರೆ ನಾನೇ ಬೇರೆ ಕಡೆ ಹೋಗುತ್ತೇನೆ ಎಂದು ಬೆಂಗಳೂರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ರು.