Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಾನು ವ್ಯಾಪಾರಿಯಾಗಿದ್ದರಿಂದ ನೋಟು ಏಣಿಸುವ ಮಷಿನ್ ಇಟ್ಟುಕೊಂಡಿದ್ದೇನೆ ವಿಧಾನಪರಿಷತ್ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಿಜಿನೆಸ್‌ಮ್ಯಾನ್ ಆಗಿದ್ದರಿಂದ ನೋಟು ಏಣಿಸುವ ಮಷಿನ್ ಇಟ್ಟುಕೊಂಡಿದ್ದೇನೆಯೇ ಹೊರತು, ನೋಟು ಮುದ್ರಿಸುವ ಮಷಿನ್ ಇಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಆರಂಭಿಸಿದ ಇಂದಿರಾ ಕ್ಯಾಂಟಿನ್ ಕೇವಲ ಬಿಟ್ಟಿ ಪ್ರಚಾರದ ತಂತ್ರ. ಸರಕಾರ ಬಿಟ್ಟಿ ಪ್ರಚಾರವನ್ನು ಹಿಂದೆ ಸರಿಸಿ, ಬಡವರಿಗೆ, ದೀನ ದಲಿತರ ಏಳಿಗೆಗೆ ಮುಂದಾಗಲಿ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಪಕ್ಷ ಕೇವಲ ಪ್ರಚಾರದಲ್ಲಿ ತೊಡಗಿದೆಯೇ ಹೊರತು ನಿಜವಾದ ಜನಪರ ಕಾಳಜಿಯನ್ನು ಹೊಂದಿಲ್ಲ. ಇಂತಹ ನಾಟಕಗಳು ಬಹಳ ದಿನ ನಡೆಯುವುದಿಲ್ಲ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.